Advertisement
ಆಲಿಸುವವರು ಯಾರು?ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು, ಪ್ರಾದೇಶಿಕ ಕಾರ್ಮಿಕ ಆಯಕ್ತರು ಮತ್ತು ಆಯಾ ಪ್ರದೇಶಗಳ ಉಪ ಮುಖ್ಯ ಕಾರ್ಮಿಕ ಆಯುಕ್ತರು ಈ ಕಂಟ್ರೋಲ್ ರೂಮ್‌ಗೆ ಸಮನ್ವಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಲಾಕ್‌ಡೌನ್ ಮೇ 3ರ ವರೆಗೆ ವಿಸ್ತರಣೆಗೊಂಡಿರುವುದರಿಂದ ಎಲ್ಲಾ ಕ್ಷೇತ್ರಗಳ ನೌಕರರ ಕೆಲಸದ ಅವಧಿ ಹೆಚ್ಚಲಿದೆ. ಈ ಬಗ್ಗೆ ಕೇಂದ್ರ ಸರಕಾರ ಶೀಘ್ರವೇ ಅಧ್ಯಾದೇಶ ಹೊರಡಿಸುವ ಸಾಧ್ಯತೆ ಇದೆ. ಸದ್ಯ ಎಂಟು ಗಂಟೆಯ ಅವಧಿ 12 ಗಂಟೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಲಾಕ್‌ಡೌನ್ ಮುಗಿದ ಬಳಿಕ ಈ ವ್ಯವಸ್ಥೆ ಜಾರಿಯಾಗಲಿದೆ. ಕಾರ್ಮಿಕ ಕಾಯ್ದೆಗಳನ್ನು ಸಮ್ಮಿಳನಗೊಳಿಸಿದ ಸಂಹಿತೆ ಸಂಸತ್ ಮುಂದೆ ಇರುವುದರಿಂದ ಅಧ್ಯಾದೇಶ ಜಾರಿಗೊಳಿಸಲಾಗುತ್ತಿದೆ.
Related Articles
Advertisement