Advertisement

ಪಾಕ್‌ಗೆ ನೆರವು ಕಟ್‌; ನೆರೆರಾಷ್ಟ್ರಕ್ಕೆ ಅಮೆರಿಕ ಚಾಟಿಯೇಟು

07:30 AM Jul 22, 2017 | Team Udayavani |

ವಾಷಿಂಗ್ಟನ್‌/ಹೊಸದಿಲ್ಲಿ: ನಿಮ್ಮ ನೆಲದಲ್ಲಿ ಉಗ್ರರು ನೆಲೆಯೂರಲು ಅವಕಾಶ ಕೊಡಬೇಡಿ ಎಂದು ಪದೇ ಪದೇ ಎಚ್ಚರಿಸುತ್ತಿದ್ದರೂ, ಕ್ಯಾರೇ ಎನ್ನದೆ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ಥಾನಕ್ಕೆ ಇದೀಗ ಅಮೆರಿಕ ಸರಿಯಾಗಿಯೇ ಚಾಟಿ ಬೀಸಿದೆ. 

Advertisement

ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳದಿದ್ದರೆ ಸುಮ್ಮನಿರಲ್ಲ ಎಂದು ಇದುವರೆಗೆ ಬಾಯಿ ಮಾತಲ್ಲಷ್ಟೇ ಹೇಳುತ್ತಾ ಬಂದಿದ್ದ ಅಮೆರಿಕ, ಈಗ ನುಡಿದಂತೆ ನಡೆಯುವ ಮೂಲಕ ಪಾಕ್‌ಗೆ ಅತಿದೊಡ್ಡ ಆಘಾತ ತಂದಿದೆ.

ಹೌದು, 2016ರ ವಿತ್ತೀಯ ವರ್ಷದಲ್ಲಿ ಪಾಕಿಸ್ಥಾನಕ್ಕೆ ನೀಡಬೇಕಿದ್ದ 350 ದಶಲಕ್ಷ ಡಾಲರ್‌(2,254.50 ಕೋಟಿ ರೂ.) ಅನ್ನು ಅಮೆರಿಕದ ರಕ್ಷಣಾ ಇಲಾಖೆ ತಡೆಹಿಡಿದಿದೆ. ಹಖನಿ ನೆಟ್‌ವರ್ಕ್‌ ವಿರುದ್ಧ ತೃಪ್ತಿದಾಯಕ ಕ್ರಮ ಕೈಗೊಳ್ಳದೇ ಇದ್ದಿದ್ದಕ್ಕೆ ಹಣಕಾಸು ನೆರವನ್ನು ನಿಲ್ಲಿಸಲಾಗಿದೆ ಎಂದು ಅಮೆರಿಕ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ಶುಕ್ರವಾರ ಹೇಳಿದ್ದಾರೆ.

“ಈ ಬಾರಿ ಪಾಕಿಸ್ಥಾನಕ್ಕೆ ನಾವು ಹಣಕಾಸು ನೆರವು ಬಿಡುಗಡೆ ಮಾಡುವುದಿಲ್ಲ. ಹಖನ್‌ ನೆಟ್‌ವರ್ಕ್‌ ವಿರುದ್ಧ ಪಾಕಿಸ್ಥಾನವು ಸೂಕ್ತ ಕ್ರಮ ಕೈಗೊಂಡಿದೆ ಎನ್ನುವುದಕ್ಕೆ ಸೂಕ್ತ ಪುರಾವೆಗಳು ದೊರೆತಿಲ್ಲದ ಕಾರಣ ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಮ್ಯಾಟಿಸ್‌ ಖಾರವಾಗಿಯೇ ನುಡಿದಿದ್ದಾರೆ. 2016ರಲ್ಲಿ ಅಮೆರಿಕವು ಪಾಕ್‌ಗೆ 900 ದಶಲಕ್ಷ ಡಾಲರ್‌(5,797 ಕೋಟಿ ರೂ.) ನೀಡಬೇಕಿತ್ತು. ಆ ಪೈಕಿ 550 ದಶಲಕ್ಷ ಡಾಲರ್‌(3,542 ಕೋಟಿ ರೂ.) ಅನ್ನು ಈಗಾಗಲೇ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಇದೀಗ ತಡೆಹಿಡಿಯಲಾಗಿದೆ.

ಇತ್ತ ಅಮೆರಿಕದಿಂದ ನೆರವು ಪಡೆದುಕೊಂಡು, ಅತ್ತ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಇತ್ತೀಚೆಗೆ ಅಮೆರಿಕದ ಸಂಸದರಿಂದ ಭಾರೀ ಆಕ್ಷೇಪ ಕೇಳಿಬಂದಿತ್ತು. ಪಾಕ್‌ಗೆ ನೆರವು ನೀಡುವುದನ್ನು ನಿಲ್ಲಿಸಬೇಕು ಎಂದೂ ಆಗ್ರಹಿಸಿದ್ದರು.

Advertisement

ಕದನ ವಿರಾಮ ಉಲ್ಲಂಘನೆ
ಪಾಕ್‌ ಪಡೆಯು ಶುಕ್ರವಾರ ಜಮ್ಮು-ಕಾಶ್ಮೀರದ ನೌಗಾಮ್‌ ವಲಯದಲ್ಲಿ ಕದನ ವಿರಾಮ ಉಲ್ಲಂ ಸಿದೆ. ಎಲ್‌ಒಸಿಯುದ್ದಕ್ಕೂ ಗುಂಡಿನ ದಾಳಿ ನಡೆಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಾಕ್‌ನ ದಾಳಿಗೆ ಭಾರತೀಯ ಸೈನಿಕರೂ ಪ್ರತ್ಯುತ್ತರ ನೀಡುತ್ತಿದ್ದಾರೆ  ಎಂದು ಸೇನೆ ತಿಳಿಸಿದೆ. ಇದು ನೌಗಾಮ್‌ ವಲಯದಲ್ಲಿ 24 ಗಂಟೆ ಗಳಲ್ಲಿ ನಡೆದ 3ನೇ ದಾಳಿ ಆಗಿದೆ. 9 ದಿನಗಳಲ್ಲಿ ಪಾಕ್‌ 6 ಬಾರಿ ಕದನ ವಿರಾಮ ಉಲ್ಲಂ ಸಿದೆ.

ಸಚಿವೆ ಸುಷ್ಮಾ ಹೇಳಿಕೆಗೆ ಚೀನ ಕ್ಯಾತೆ
ಚೀನವು ಸಿಕ್ಕಿಂ ಗಡಿಯಲ್ಲಿ ಯಥಾಸ್ಥಿತಿ ಉಲ್ಲಂ ಸಿದೆ ಎಂದು ಸಂಸತ್‌ನಲ್ಲಿ ಗುರುವಾರ ಸಚಿವೆ ಸುಷ್ಮಾ ಸ್ವರಾಜ್‌ ನೀಡಿದ ಹೇಳಿಕೆಗೆ ಚೀನ ಕೆಂಡಕಾರಿದೆ. ಸಚಿವೆ ಸುಷ್ಮಾ ಅವರು ಸಂಸತ್‌ನಲ್ಲೇ ಸುಳ್ಳು ಹೇಳಿದ್ದಾರೆ ಎಂದು ಚೀನದ ಗ್ಲೋಬಲ್‌ ಟೈಮ್ಸ್‌ ಆರೋಪಿಸಿದೆ. ಅಲ್ಲದೆ, ಚೀನದ ಗಡಿಯನ್ನು ಭಾರತ ಅತಿಕ್ರಮಿಸಿಕೊಂಡಿದ್ದು ನಗ್ನ ಸತ್ಯ. ಭಾರತದ ಸೇನಾಶಕ್ತಿಯು ಚೀನಗಿಂತ ಬಹಳಷ್ಟು ದುರ್ಬಲ ವಾಗಿದೆ. ನಮ್ಮ ಭೂಮಿಯಲ್ಲಿ ಒಂದಿಂಚನ್ನೂ ವಶಪಡಿಸಿ ಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದೂ ಹೇಳಿದೆ.

ಬೋಫೋರ್ಸ್‌ ಗನ್‌ಗೆ ಮೇಡ್‌ ಇನ್‌ ಜರ್ಮನಿ ಲೇಬಲ್‌
ಚೀನದಲ್ಲಿ ಉತ್ಪಾದಿಸಿದ ಬಿಡಿಭಾಗಗಳ ಮೇಲೆ “ಮೇಡ್‌ ಇನ್‌ ಜರ್ಮನಿ’ ಎಂದು ಅಚ್ಚು ಹಾಕಿ, ಅವುಗಳನ್ನು ಭಾರತ ಸೇನೆ ಬಳಸುವ ಬೊಫೋರ್ಸ್‌ ಗನ್‌ಗಳಿಗೆ ಅಳವಡಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ದಿಲ್ಲಿ ಮೂಲದ ಸಿಧ್‌ ಸೇಲ್ಸ್‌ ಸಿಂಡಿಕೇಟ್‌ ಎಂಬ ಕಂಪೆ‌ನಿ ಈ ಕೃತ್ಯದಲ್ಲಿ ತೊಡಗಿದ್ದು, ಕಂಪೆ‌ನಿ ವಿರುದ್ಧ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ ಧನುಶ್‌ ಗನ್‌ಗಳಿಗೆ ಅಳವಡಿಸಲು ಚೀನ ಉತ್ಪಾದಿತ ಕಳಪೆ ಬಿಡಿಭಾಗಗಳನ್ನು ಪೂರೈಸುತ್ತಿದ್ದ ಜಬಲ್ಪುರದ ಗನ್ಸ್‌ ಕ್ಯಾರೇಜ್‌ ಫ್ಯಾಕ್ಟರಿ ವಿರುದ್ಧವೂ ಕ್ರಿಮಿನಲ್‌ ಸಂಚು, ವಂಚನೆ ಮತ್ತು ನಕಲು ಮಾಡಿರುವ ಪ್ರಕರಣ ದಾಖಲಿಸಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next