ಕೊಪ್ಪಳ: ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಬೇಕೆಂದು ಪೊಲೀಸ್ ಇಲಾಖೆ ಆರಂಭಿಸಿದ ಜಾಗೃತಿ ಜಾಥಾಗೆ ಕೊಪ್ಪಳದಲ್ಲಿ ಎಸ್ಪಿ ಟಿ. ಶ್ರೀಧರ್ ಚಾಲನೆ ನೀಡಿದರು.
ನಗರದ ವಿವಿಧ ರಸ್ತೆಗಳಲ್ಲಿ ಜಾಥಾ ತಂಡ ಶಿಸ್ತುಬದ್ಧವಾಗಿ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆಯಿತು.
ವಾಹನ ಸವಾರರು ರಸ್ತೆ ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಮ್ಮ ಜೀವ ನೀವೇ ರಕ್ಷಣೆ ಮಾಡಿಕೊಳ್ಳಬೇಕು. ಕಳೆದ ಮೂರು ವರ್ಷದಲ್ಲಿ ಹೆಲ್ಮೆಟ್ ಇಲ್ಲದೆಯೇ ಹಲವು ಸಾವು-ನೋವು ಸಂಭವಿಸಿವೆ. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಹಲವು ಅಪಘಾತಗಳು ನಡೆದಿವೆ. ಈ ಬಗ್ಗೆ ಜಾಗೃತರಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎನ್ನುವ ಸಂದೇಶ ನೀಡಲಾಯಿತು. ಒಂದು ವೇಳೆ ನಿಯಮ ಪಾಲನೆ ಮಾಡದಿದ್ದರೆ ದಂಡದ ಬಿಸಿಯ ಎಚ್ಚರಿಕೆಯ ಸಂದೇಶವನ್ನೂ ನೀಡಲಾಯಿತು.
ಇದನ್ನೂ ಓದಿ:ರೈತರ ಸಮಸ್ಯೆ ನೀಗಿಸಲು ರೈತ ಸಂಘ ಆಗ್ರಹ
ನಗರದ ವಿವಿಧ ರಸ್ತೆಗಳಲ್ಲಿ ಪೊಲೀಸ್ ಪಡೆ ಶಿಸ್ತುಬದ್ಧವಾಗಿ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಸಂಚಾರ ನಡೆಸಿ ಜನರ ಗಮನ ಸೆಳೆಯಿತಲ್ಲದೇ ನಿಯಮ ಪಾಲಿಸುವಂತೆ ಸಂದೇಶ ನೀಡಿದರು