Advertisement
ಜ.11, 12 ಮತ್ತು 13ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಆದಿವುಡುಪಿ ಎನ್‌ಸಿಸಿ ಮೈದಾನದಲ್ಲಿ ಹಾರಾಟ ನಡೆಯಲಿದೆ. ಉಡುಪಿಯನ್ನು ಕೆಳಗಿನಿಂದ ನೋಡುವುದಕ್ಕೂ ಮೇಲಿನಿಂದ ಹಾರಾಡಿಕೊಂಡು ಸವಿಯುದಕ್ಕೂ ವ್ಯತ್ಯಾಸ ಇದೆ. ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಮಂತ್ರ ಟೂರಿಸಂ ಡವೆಲಪ್‌ಮೆಂಟ್ ಕಂಪೆನಿ, ಮತ್ತು ಚಿಪ್ಸನ್ ಕಂಪೆನಿ ಕಳೆದ ವರ್ಷವೇ ಹೆಲಿಟೂರಿಸಂನ್ನು ಆರಂಭಿಸಿವೆ.
ಹೆಲಿಕಾಪ್ಟರ್‌ನಲ್ಲಿ ಹಾರಬಯಸುವವ ರಿಗೆ ಜಾಲಿರೈಡ್, ಅಡ್ವೆಂಚರ್ ರೈಡ್ ಎಂದು ಎರಡು ಬಗೆಯ ಪ್ಯಾಕೇಜ್ ಇದೆ. ಜಾಲಿರೈಡ್‌ನಲ್ಲಿ ಉಡುಪಿ ಅಥವಾ ಮಣಿಪಾಲ ಯಾವುದಾದರೂ ಒಂದನ್ನು ಅಯ್ಕೆ ಮಾಡಬೇಕು. ಇದರಲ್ಲಿ 8 ನಿಮಿಷದ ಹಾರಾಟವಿದೆ. ಆಡ್ವೆಂಚರ್ ರೈಡ್‌ನಲ್ಲಿ ಸೈಂಟ್‌ಮೇರಿಸ್ ಅಥವಾ ಉಡುಪಿ ಮಣಿಪಾಲದಲ್ಲಿ ಹಾರಾಟ ನಡೆಸುತ್ತದೆ. ಇದರಲ್ಲಿ 10 ನಿಮಿಷ ತಿರುಗಾಟದ ಅವಕಾಶವಿದ್ದು, ಅಲ್ಪ ಸ್ವಲ್ಪ ಸ್ಟಂಟ್ ಕೂಡ ಇದೆ. ಒಮ್ಮೆ ಗೆ 6 ಮಂದಿಗೆ ಪ್ರಯಾಣಿಸುವ ಅವಕಾಶವಿದೆ. ಜಾಲಿರೈಡ್‌ಗೆ ರೂ. 2,500, ಅಡ್ವೆಂಚರ್ ರೈಡ್‌ಗೆ 3,000 ನಿಗದಿಪಡಿಸಲಾಗಿದ್ದು, ಎರಡು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.
Related Articles
ಹೆಲಿ ಟೂರಿಸಂ ಉಡುಪಿಯಲ್ಲಿ ಶಾಶ್ವತವಾಗಿ ಆರಂಭಿಸುವ ಯೋಜನೆ ಇದ್ದು, ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಸಂದರ್ಶನಕ್ಕಾಗಿ ರಿಲೀಜಿಯಸ್ ಟೂರಿಸಂ, ತುರ್ತು ಆರೋಗ್ಯ ಸೇವೆಗಾಗಿ ಮೆಡಿಕಲ್ ಟೂರಿಸಂಗೂ ವಿಸ್ತರಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.
– ಸುದೇಶ್ ಶೆಟ್ಟಿ, ಮಂತ್ರ ಟೂರಿಸಂ ಡೆವೆಲಪ್‌ಮೆಂಟ್
Advertisement