Advertisement

ಹೇಳದೇ ಹೋದವನಿಗೆ ಹೇಳಲೇಬೇಕಿರುವ ಮಾತುಗಳು…

03:50 AM Mar 14, 2017 | |

ಮನಸ್ಸು ಕಲ್ಲಾಗಿದೆ. ಅಳಬೇಕೆಂದರೂ ಕಣ್ಣೀರಿಲ್ಲ. ಜ್ವಾಲಾಮುಖೀಯಂತೆ ಮನಸ್ಸು ಕೊತ ಕೊತ ಕುದಿಯುತ್ತಿದೆ. ಬೇಡ ಬೇಡವೆಂದರೂ ಕಣ್ಮುಂದೆ ಪ ದೇ ಪದೇ ಆಕಾಶ್‌ ನ ಮುಖ ನೆನಪಿಗೆ ಬರುತ್ತಿದೆ. ಅವನೊಂದಿಗೆ ಕಳೆದ ನೆನಹುಗಳನ್ನು ಮರೆಯ¸ ೇಕೆಂದಷ್ಟೂ ಮತ್ತೆ  ಮತ್ತೆ ನೆನಪಾಗುತ್ತಿದೆ. ಅವನೊಂದಿ ಗೆ ನಾನು ಸುತ್ತದ ಸ್ಥಳಗಳಿಲ್ಲ. ಕಟ್ಟಿದ ಕನಸುಗಳಿಗೆ, ಇಟ್ಟ ನಂಬಿಕೆಗಳಿಗೆ
ಲೆಕ್ಕವಿಲ್ಲ. ಕಳಿಸಿದ ಮೆಸೇಜ್‌, ಮಾಡಿದ ಆಣೆ ಪ್ರಮಾಣಗಳಿಗಂತೂ ಕೊನೆಯಿಲ್ಲ. ನಾವಿಬ್ಬರೂ ಎಷ್ಟು ಪ್ರೀತಿಸುತ್ತಿದ್ದೆವೆಂದರೆ ಒಂದು ಕ್ಷಣ ಕೂಡಾ ಅಗಲುತ್ತಿರಲಿಲ್ಲ. ಇಬ್ಬರದೂ ಒಂದೇ ಕಾಲೇಜ್‌, ಒಂದೇ ಕಾಂಬಿನೇಷನ್‌. ಮೂರು ವರ್ಷಗಳಿಂದ ಪ್ರೇಮಯಾನ ಆರಂಭವಾಗಿತ್ತು.

Advertisement

ಅವನೊಂದಿಗೆ ಮರದಡಿ ಕೂತು ಮಾತಾಡಿದ್ದು, ಬೈಕಲ್ಲಿ ಸುತ್ತಿದ್ದು, ಕೈ ಕೈ ಹಿಡಿದುಕೊಂಡು ಬೆಟ್ಟ ಹತ್ತಿ ದ್ದು, ತುಂತುರು
ಮಳೆಯಲ್ಲಿ ಇಬ್ಬರೂ ಮೈ ತೋಯಿಸಿಕೊಂಡು ಮನೆಯಲ್ಲಿ ಅಮ್ಮನಿಂದ ಬೈಸಿಕೊಂಡಿದ್ದು… ಹೀಗೇ ಹೇಳುತ್ತಾ ಹೋದರೆ ಆ ಸಿಹಿ ನೆನಪುಗಳಿಗೆ ವಿರಾಮ ಇಲ್ಲವೇ ಇಲ್ಲ.

ನನ್ನ ಹುಟ್ಟಿದ ದಿನದಂದು ಅವನು ಮಾಡಿದ ಮೊದಲ ವಿಶ್‌ ಜೀವನದಲ್ಲಿ ಮರೆಯಲಾಗದಂಥದ್ದು. ಅಂದೇ ಅಲ್ಲವೇ ಅವನು
ಹೇಳಿದ್ದು? ನೀನೆಂದರೆ ನನಗೆ ಬೆಟ್ಟದಷ್ಟು ಪ್ರೀತಿ. ಆಕಾಶದಂತೆ ಮೃದು ಮನಸ್ಸು ಈ ನಿ ನ್ನ ಆಕಾಶ್‌ನದ್ದು. ನನ್ನ ಜೀವಕ್ಕಿಂತ ನನಗೆ ನೀನೇ ಮುಖ್ಯ ಎಂದು… ಇಷ್ಟೆಲ್ಲಾ ಆಸೆ, ಆಕಾಂಕ್ಷೆಗಳನ್ನು ಹುಟ್ಟಿಸಿ, ಆಶ್ವಾಸನೆ ನೀಡಿ ಕಾರಣವ ಹೇಳದೆ ನನ್ನನ್ನೇಕೆ ಬಿಟ್ಟುಹೋದ?
ನಡುನೀರಿನಲ್ಲಿ ಒಂಟಿಯನ್ನಾಗಿಸಿದ? “ನೀನೇ ನನ್ನ ಜೀವ, ಜೀವನ’ ಅಂತೆಲ್ಲಾ ಅಂದು ಈಗ ಇನ್ನೊಬ್ಬಳ ಜೊತೆ ಸಂತೋಷವಾಗಿರುವ.

ಆಕಾಶ್‌ನ ಮನಸ್ಸು ಆಕಾಶದಷ್ಟೇ ವಿಶಾಲ ಅಂದುಕೊಂಡಿದ್ದೆ. ಅದರೆ ಈಗ ಅರಿತೆ: ಅದು ಇನ್ನೊಂದು ಮನಸಿನ ನೋವನ್ನು ಅರ್ಥ
ಮಾಡಿಕೊಳ್ಳದೆ ಮೋಸ ಮಾಡುವ, ಮಧ್ಯದಲ್ಲೇ ಬಿಟ್ಟು ಹೋಗುವ ಮನಸ್ಸು! ನನ್ನನ್ನು ಬಿಟ್ಟು ಹೋಗಲು ಆತನಿಗೆ ನನ್ನಲ್ಲಿ ಕಂಡ ದೋಷವಾದರೂ ಏನು? ಹೀಗೆ ಯೋಚಿಸಿಯೇ ಈ ಪತ್ರದ ಮೂಲಕ ಅವನಿಗೆ ಹೇಳ್ತಾ ಇದ್ದೀನಿ: “ಪ್ರಿಯ ಮಿತ್ರಾ, ನೀನೆಲ್ಲೇ ಇದ್ದರೂ ಒಮ್ಮೆ ಬಂದು ಕಾರಣವ ತಿಳಿಸು. ಜೀವನ ಇಲ್ಲಿಗೆ ನಿಂತಿಲ್ಲ. ಅದು ನಿಂತ ನೀರಲ್ಲ. ಸದಾ ಹರಿಯುತ್ತಾ ಕ್ರಿಯಾಶೀಲವಾಗಿರುತ್ತದೆ. ಹಾಗೇ ನನ್ನ ಬದುಕು ಕೂಡಾ ವಿಶಾಲವಾಗಿದೆ. ಕಲ್ಪನಾ ಲೋಕದಿಂದ ಹೊರಬಂದು ವಾಸ್ತವ ಅರಿಯಬೇಕು. ಕೇವಲ ನಿನ್ನ ನೆನಪೇ ನನ್ನ ಜೀವನವಲ್ಲ. ನಿನ್ನ ಪ್ರೀತಿ ಕೊನೆಯಾಗಿದೆ ನಿಜ. ಆದರೆ ನನ್ನ ಅಪ್ಪ- ಅಮ್ಮನ ಪ್ರೀತಿ ಸದಾ ನನ್ನ ಮೇಲಿದೆ. ಇಷ್ಟು ದಿನ ನಿನಗೋಸ್ಕರ ಬದುಕಿದೆ. ಇನ್ನುಮುಂದೆ ನನ್ನ ಹೆತ್ತವರಿಗೆ ಜೀವನ ಮುಡಿಪಿಡುವೆ.

ನಾಗರತ್ನ ಮತ್ತಿಘಟ್ಟ, ಶಿರಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next