Advertisement

ಮೋಷನ್ ಪೋಸ್ಟರ್ ರಿಲೀಸ್ ಮಾಡಿದ ‘ಹೆಜ್ಜಾರು’

07:02 PM Jul 10, 2023 | Team Udayavani |

“ಹೆಜ್ಜಾರು’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಕ್ಕೆ ಅಣಿಯಾಗಿದೆ. ಇತ್ತೀಚೆಗೆ ಈ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಕುತೂಹಲ ಕೆರಳಿಸುವಂತಹ ಹಲವು ಆಯಾಮಗಳಿರೋ ಪೋಸ್ಟರ್‌ನಲ್ಲಿ, ಪೆಂಟಿಂಗ್‌ ಮೂಲಕ ಚಿತ್ರದ ಒಟ್ಟು ಆಶಯವನ್ನು ಈ ಮೋಷನ್‌ ಪೋಸ್ಟರ್‌ನಲ್ಲಿ ಮೂಲಕ ಬಣ್ಣಿಸಲಾಗಿರೋದು ವಿಶೇಷ. ಇಲ್ಲಿಯವರೆಗೂ ಹದಿಮೂರು ಧಾರಾವಾಹಿಯನ್ನು ನಿರ್ದೇಶಿಸಿ,ನಿರ್ಮಿಸಿರುವ ಕೆ.ಎಸ್‌. ರಾಮ್‌ಜಿ ಅವವರ ಮೊದಲ ನಿರ್ಮಾಣದ ಚಿತ್ರವಿದು.

ಇ ಹರ್ಷಪ್ರಿಯ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶನದ ಕ್ಯಾಪ್‌ ತೊಟ್ಟಿದ್ದಾರೆ. ಚಿತ್ರಕ್ಕೆ ಅಮರ್‌. ಎಲ್‌ ಛಾಯಾಗ್ರಹಣವಿದ್ದು, ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಸಾಹಸ ದೃಶ್ಯದ ಸನ್ನಿವೇಶವನ್ನು ನರಸಿಂಹ ನಿರ್ದೇಶಿಸಿದ್ದು, ಭಜರಂಗಿ ಖ್ಯಾತಿಯ ಮೋಹನ್‌ ಅವರ ನೃತ್ಯ ನಿರ್ದೇಶನ ಮಾಡಿದ್ದಾರೆ.

ಕಾರ್ತಿಕ್‌ ಭಟ್‌ ಸಂಭಾಷಣೆ ಇರುವ ಈ ಚಿತ್ರದ ಮೂಲಕ ಭಗತ್‌ ಆಳ್ವ ನಾಯಕ ನಟನಾಗಿ ಹಿರಿತೆರೆಗೆ ಎಂಟ್ರಿ ಕೊಡುತ್ತಿದ್ದು, ಇವರಿಗೆ ಖಾಸಗಿ ಪುಟಗಳು ಖ್ಯಾತಿಯ ಲಿಯೋನಿಲ್ಲಾ ಶ್ವೇತಾ ಡಿಸೋಜ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ತಾರಾಗಣದಲ್ಲಿ ಗೋಪಾಲ್‌ ದೇಶಪಾಂಡೆ, ನವೀನ್‌ ಕೃಷ್ಣ, ಮುನಿ, ಅರುಣ ಬಾಲರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಹೆಜ್ಜಾರು ವಿಭಿನ್ನ ಪ್ರಯೋಗದ ಜೊತೆಗೆ ಔಟ್‌ ಅಂಡ್‌ ಔಟ್‌ ಎಂಟರ್‌ಟೈನ್ಮೆಂಟ್‌ ಇರುವಂತಹ ಸಿನಿಮಾ ಆಗಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು.

Advertisement
Advertisement

Udayavani is now on Telegram. Click here to join our channel and stay updated with the latest news.

Next