Advertisement

ಹೆಜಮಾಡಿ ಮಹಾಲಿಂಗೇಶ್ವರ ದೇಗುಲ: ಭೂದಾನ ಶಾಸನ ಪತ್ತೆ

10:57 PM May 31, 2020 | Sriram |

ಪಡುಬಿದ್ರಿ: ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಇದ್ದ ಶಿಲಾಶಾಸನವನ್ನು ಓದಿರುವ ಇತಿಹಾಸ ಸಂಶೋಧಕ ಸುಭಾಸ್‌ ನಾಯಕ್‌ ಬಂಟಕಲ್ಲು ಅವರು ಲಿಪಿ ಲಕ್ಷಣದ ಆಧಾರದಲ್ಲಿ ಇದು 14-15ನೇ ಶತಮಾನದ ಭೂದಾನ ಶಾಸನ ಎಂದು ಗುರುತಿಸಿದ್ದಾರೆ.

Advertisement

ಶಾಸನದ ಮೊದಲ ಹಾಗೂ ಕೊನೆಯ ಭಾಗ ಸಂಪೂರ್ಣ ತ್ರುಟಿತ ಗೊಂಡಿರುವುದರಿಂದ ಯಾವ ಅರಸರ ಕಾಲದಲ್ಲಿ ಯಾರಿಗೆ ನೀಡಲಾದ ಭೂದಾನ ಶಾಸನ ಎಂದು ಹೇಳಲಾಗುವುದಿಲ್ಲ ಎಂದಿರುವ ಅವರು ಅಸ್ಪಷ್ಟವಾಗಿ ದಾನ ನೀಡಲಾದ ಭೂಮಿಯ ಚತುಃ ಸೀಮೆಯ (ಚಕ್ಕು ಬಂಧಿಯ) ನಮೂದುಗಳಿವೆ. ಸಾಮಾನ್ಯವಾಗಿ ದಾನ ಶಾಸನಗಳಲ್ಲಿ ಇರುವ ಶಾಪಾಶಯವೂ ಸ್ಪಷ್ಟವಾಗಿ ಹೇಳಲಾಗದು.

ದೇವಳದ ಬಾವಿಕಟ್ಟೆಯ ಬಳಿ ಗೋಡೆಗೆ ಆನಿಸಿ ಇಟ್ಟಂತೆ ಈ ಶಾಸನವು ದೊರಕಿದ್ದು, ಈ ಶಿಲಾಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರು ಹಾಗೂ ಶಿವಲಿಂಗ, ಜೋಡಿ ನಂದಿ, ದೀಪಗಳ ಉಬ್ಬು ಚಿತ್ರಗಳಿವೆ. ಈ ಶಾಸನವು 66 ಇಂಚು ಉದ್ದ, 25 ಇಂಚು ಅಗಲವಿದೆ.

ಜೀರ್ಣೋದ್ಧಾರಗೊಳ್ಳುತ್ತಿದೆ
ಶಾಂಭವಿ ನದಿ ತೀರದಲ್ಲಿರುವ ಹನ್ನೊಂದು ಶಿವಾಲಯಗಳಲ್ಲಿ ಬಸ್ತಿಪಡ್ಪು ಅಥವಾ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನವೂ ಒಂದಾಗಿದ್ದು, ಇದು ಸುಮಾರು 10ನೇ ಶತಮಾನದ್ದೆಂದು ಹೇಳಲಾಗುತ್ತಿದೆ. ಗಜಪೃಷ್ಠ ಆಕಾರದ ಈ ದೇಗುಲವು ಪ್ರಸ್ತುತ ಸಗ್ರವಾಗಿ ಜೀರ್ಣೋ ದ್ಧಾರಗೊಳ್ಳುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next