Advertisement
ಜ. 20 ರಂದು ಐರೋಲಿಯ ಹೆಗ್ಗಡೆ ಭವನದಲ್ಲಿ ನಡೆದ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ 58 ನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ, ಯುವ ವಿಭಾಗದ ಹೆಗ್ಡೆ ವಿವಾಹ ಡಾಟ್‌ಕಂಗೆ ಚಾಲನೆ ನೀಡಿ ಮಾತನಾಡಿದ ಅವರು, ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆಯಬೇಕು ಎಂದರು.
Related Articles
Advertisement
ಸಮಾರಂಭದಲ್ಲಿ ಸಂಘದ ಹಿರಿಯ ಸದಸ್ಯರುಗಳಾದ ಹೆಗ್ಗಡೆ ಸೇವಾ ಸಂಘದ ಉಪಾಧ್ಯಕ್ಷ ಮನ್ಮಥ್ ಜಿ. ಹೆಗ್ಡೆ, ಉದ್ಯಮಿ, ಹಿರಿಯ ಸದಸ್ಯ ರವಿ ಡಿ. ಹೆಗ್ಡೆ, ದಕ್ಷಿಣ ಕನ್ನಡ ಜಿÇÉಾ ರಾಜ್ಯೋತ್ಸವ ಸಾಧನಾ ಪ್ರತಿಭಾ ಪುರಸ್ಕಾರ ಪಡೆದ ಬಾಲ ಪ್ರತಿಭೆಗಳಾದ ಕು| ಕುಮಾರಿ ದ್ರಿಶ್ಯಾ ದಯಾನಂದ್ ಹೆಗ್ಡೆ ಮತ್ತು ಕುಮಾರಿ ಧನ್ಯಾ ಧನಂಜಯ್ ಹೆಗ್ಡೆ ಇವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಸಂಜೀವ ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಎಸ್. ಹೆಗ್ಡೆ, ಕಾರ್ಯದರ್ಶಿ ಶಂಕರ ಹೆಗ್ಡೆ, ಕೋಶಾಧಿಕಾರಿ ರಮೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಶಂಕರ ಹೆಗ್ಡೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ವಿಶ್ವನಾಥ ಹೆಗ್ಡೆ, ಸುಜಾತಾ ಸದಾಶಿವ ಹೆಗ್ಡೆ, ಭಾರತಿ ಮೋಹನ್‌ದಾಸ್ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ರಂಗನಟ ಅನಿಲ್ ಹೆಗ್ಡೆ ಸಮ್ಮಾನ ಪತ್ರ ವಾಚಿಸಿದರು. ಜತೆ ಕಾರ್ಯದರ್ಶಿ ರವಿ ಎಸ್. ಹೆಗ್ಡೆ ಹೆರ್ಮುಂಡೆ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ರಮೇಶ್ ಎಂ. ಹೆಗ್ಡೆ ವಂದಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬೆಳಗ್ಗೆ ಪುರೋಹಿತ ರಮಾಕಾಂತ್ ಕುಂಜಿತ್ತಾಯ ಇವರ ನಿರ್ದೇಶನದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಪೂಜಾ ಕಾರ್ಯಕ್ರಮದ ನಂತರ ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ, ಸದಸ್ಯ ಬಾಂಧವರು, ಮಕ್ಕಳು, ಸದಸ್ಯೆಯರಿಂದ ಸಾಂಸ್ಕೃತಿಕ ವೈವಿಧ್ಯ, ಮಧ್ಯಾಹ್ನ ರಾಜೇಶ್ ಆಚಾರ್ಯ ಪರ್ಕಳ ರಚಿಸಿರುವ ಈ ಪೊರ್ಲು ತೂವೊಡಿc ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕವನ್ನು ಖ್ಯಾತ ರಂಗ ನಟ ನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ ಇವರ ನಿರ್ದೇಶನದಲ್ಲಿ ಸಂಘದ ಸದಸ್ಯರು ಹಾಗೂ ಮುಂಬಯಿಯ ಖ್ಯಾತ ಅತಿಥಿ ಕಲಾವಿದರ ಸಹಕಾರದೊಂದಿಗೆ ಪ್ರದರ್ಶನಗೊಂಡಿತು. ಸದಸ್ಯ ಬಾಂಧವರು, ಸಮಾಜ ಬಾಂಧವರು, ತುಳು-ಕನ್ನಡಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಎಸ್. ಹೆಗ್ಡೆ, ಜೊತೆ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ರವಿ ಎಸ್. ಹೆಗ್ಡೆ, ಜೊತೆ ಕೋಶಾಧಿಕಾರಿ ಚಂದ್ರಶೇಖರ್ ಬಿ. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಷೇಕ್ ಎಸ್. ಹೆಗ್ಡೆ, ಕ್ಯಾಟರಿಂಗ್ ಸಮಿತಿಯ ಕಾರ್ಯಾಧಕ್ಷ ಬಿ. ಗೋಪಾಲ್ ಹೆಗ್ಡೆ, ಸದಸ್ಯತನ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ್ ಹೆಗ್ಡೆ ಕಲ್ಯಾಣ್, ಕಟ್ಟಡ ಸ್ವತ್ಛತಾ ಸಮಿತಿಯ ಕಾರ್ಯಾಧ್ಯಕ್ಷ ಕೆ. ಪ್ರಸನ್ನ ಹೆಗ್ಡೆ, ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷೆ ಲೀಲಾವತಿ ರವೀಂದ್ರ ಹೆಗ್ಡೆ ಮತ್ತು ಆಡಳಿತ ಮಂಡಳಿ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಾರಂಭದಲ್ಲಿ ಸಂಘದ ಮಾಜಿ ಕಾರ್ಯದರ್ಶಿ, ಹಿರಿಯ ಸದಸ್ಯ ಆನಂದ ಎನ್. ಹೆಗ್ಡೆ ಮತ್ತು ಶಕುಂತಳಾ ಎ. ಹೆಗ್ಡೆ ದಂಪತಿಯನ್ನು ಹೆಗ್ಗಡೆ ಸೇವಾ ಸಂಘದ ಜೀವನ ಶ್ರೇಷ್ಠ ಸಾಧಕ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ, ಇತ್ತೀಚೆಗೆ ಡಾಕ್ಟರೇಟ್ ಪದವಿ ಪುರಸ್ಕೃತ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ವಿನೋದಿನಿ ಎಸ್. ಹೆಗ್ಡೆ ದಂಪತಿ, ದಕ್ಷಿಣ ಕನ್ನಡ ಜಿÇÉಾ ಹೆಗ್ಗಡೆ ಸಮಾಜ ಸಂಘ ಇದರ ಅಧ್ಯಕ್ಷ ಹಾಗೂ ರಂಗ ನಟ ಸುಂದರ ಹೆಗ್ಡೆ ಹಾಗೂ ಎರ್ಲಪಾಡಿ ಗ್ರಾಮದ ಜನತೆಗೆ ಪ್ರೀತಿ ಪಾತ್ರರಾಗಿರುವ ಉದಯಕುಮಾರ್ ಹೆಗ್ಡೆ, ಶ್ರೀ ವೀರಮಾರುತಿ ದೇವಸ್ಥಾನ ಕೋಟೆಬಾಗಿಲು ಇದರ ಆಡಳಿತ ಮೊಕ್ತೇಸರ ಕೆ. ಶ್ಯಾಮ ಹೆಗ್ಡೆ ಹಾಗೂ ಬೆಂಗಳೂರು ಹೆಗ್ಗಡೆ ಸೇವಾ ಸಂಘ ಇದರ ಮಾಜಿ ಅಧ್ಯಕ್ಷ, ಶ್ರೀ ವೀರ ಮಾರುತಿ ದೇವಸ್ಥಾನ ಕೋಟೆಬಾಗಿಲು ಇದರ ಮಾಜಿ ಆಡಳಿತ ಮೊಕ್ತೇಸರ, ಸಮಾಜ ಸೇವಕ, ಧಾರ್ಮಿಕ ನೇತಾರ ದೇವೇದ್ರ ಹೆಗ್ಡೆ ಕೊಕ್ರಾಡಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಲಾಯಿತು.
ಚಿತ್ರ-ವರದಿ : ಸುಭಾಷ್ ಶಿರಿಯಾ