ಪಿರಿಯಾಪಟ್ಟಣ: ಆರೋಗ್ಯವಂತ ಸಮಾಜ ದಲ್ಲಿ ಜನರಲ್ಲಿ ಧಾರ್ಮಿಕ ಭಾವನೆಗಳು ಹೆಚ್ಚಾಗಬೇಕು ಎಂದು ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ವೆಂಕಟೇಶ್ ತಿಳಿಸಿದರು. ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಧರ್ಮದರ್ಶಿ ಮಂಡಳಿ ಸಂಯುಕ್ತವಾಗಿ 27 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸಿದ್ದ ಮಲ್ಲಿಕಾರ್ಜುನಸ್ವಾಮಿ ಸಮೇತ ಭ್ರಮರಾಂಭ ಮತ್ತಿತರ ದೇವರ ರಥವನ್ನು ಅನಾವರಣ ಗೊಳಿಸಿ ನಂತರ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ರಥ ದುರಸ್ತಿ ಯಾಗದ ಬಗ್ಗೆ ಸಾರ್ವಜನಿಕರು ಹಾಗೂ ಮತ್ತಿತರ ಸಂಘಟನೆಗಳ ಪ್ರತಿ ಬಾರಿ ಪ್ರತಿಭಟನೆ ನಡೆಸುತ್ತಿವೆ. ಇದೀಗ ಭಕ್ತರ ಸಹಕಾರದಿಂದ ರಥ ನಿರ್ಮಾಣವಾಗಿರುವುದು ಸಾರ್ವ ಜನಿಕರಲ್ಲಿ ಇಂದಿಗೂ ಧಾರ್ಮಿಕ ಭಾವನೆ ಗಳು ಜಲ್ವಂತವಾಗಿವೆ ಎಂಬುದನ್ನು ತೋರ್ಪ ಡಿಸುತ್ತದೆ ಎಂದು ತಿಳಿಸಿದರು.
ನಂತರ ಅವರು ಬೆಟ್ಟದಪುರ ಗ್ರಾಮ ದಲ್ಲಿಯೇ ಮೂವರುವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿಗೆ ಹಾಗೂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಚ್ಚುವರಿ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ದೇವಸ್ಥನದ ಧರ್ಮದರ್ಶಿ ಮಂಡಳಿ ವತಿಯಿಂದ ಕೆ.ವೆಂಕಟೇಶ್ ಹಾಗೂ ಅವರ ಪತ್ನಿ ಭಾರತಿವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ರಥಕ್ಕೆ ಧನ ಸಹಾಯ ನೀಡಿದ ವಿವಿಧ ಸಾರ್ವಜನಿಕರನ್ನು ಕೂಡ ಸನ್ಮಾನಿಸಲಾಯಿತು.
3 ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಪ್ರಥಮ ದರ್ಜೆ ಕಾಲೇಜು ನಡೆಯುತ್ತಿದ್ದು, ಈ ಕಟ್ಟಡ ನಿರ್ಮಾಣವಾಗುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ವಾಗಲಿದೆ. ನಮ್ಮದೆ ಸರ್ಕಾರ ರಾಜ್ಯದಲ್ಲಿ ಆಡಳಿತ ದಲ್ಲಿ ಇರುವುದರಿಂದ ಅಭಿವೃದ್ಧಿ ಗಾಗಿ ಅನುದಾನ ತಂದು ಮಾಡಲು ಸಹಕಾರಿ ಯಾಗಿದೆ. ಆದರೆ ನಮ್ಮ ವಿರೋಧಿಗಳು ತಾಲೂಕಿನಾದ್ಯಂತ ನೈತಿಕತೆ ಇಲ್ಲದೆ ನಾವು ಮಾಡುವ ಜನ ಪರ ಕಾರ್ಯಕ್ರಮಗಳನ್ನು ಮನಬಂದಂತೆ ದೂರುತ್ತಿರುವುದು ಬೇಸರದ ಸಂಗತಿ, ಇದಕ್ಕೆಲ್ಲ ತಕ್ಕ ಉತ್ತರವನ್ನು ಮತ ದಾರರು ನೀಡಲಿದ್ದಾರೆ ಎಂದು ತಿಳಿಸಿದರು.
ಇಂದಿನ ಚುನಾವಣೆಗಳಲ್ಲಿ ಹಣ ಹಾಗೂ ಜಾತಿ ಬಲ ಯಾರಿಗಿದೆಯೋ ಅಂತಹವರು ಜಯ ಸಾಧಿಸುವಂತಾಗಿದೆ, ಸಾಧನೆಗಳು ಲೆಕ್ಕಕ್ಕೆ ಬರುತ್ತಿಲ್ಲ. ನಾವು ತಾಲೂಕಿನಾದ್ಯಂತ ಮಾಡಿರುವ 25 ವರ್ಷಗಳ ಅಭಿವೃದ್ಧಿಯನ್ನು ಯಾವ ಜನ ಪ್ರತಿನಿಧಿಯು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು ಗ್ರಾಮದ ಎಪಿಎಂಸಿ ಆವರಣದಲ್ಲಿ ಮೇವು ಕೇಂದ್ರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಮಂಜುನಾಥ್, ತಾಪಂ ಅಧ್ಯಕ್ಷೆ ನಿರೂಪಾ ರಾಜೇಶ್, ಸದಸ್ಯರಾದ ಮಲ್ಲಿಕಾರ್ಜುನ, ಕುಂಜಪ್ಪ ಕಾರ್ನಾಡ್, ತಹಶೀಲ್ದಾರ್ ರಂಗರಾಜು, ತಪಂ ಮಾಜಿ ಅಧ್ಯಕ್ಷೆ ಸರಸ್ವತಿ, ಗ್ರಾಪಂ ಅಧ್ಯಕ್ಷೆ ಯಶೋಧಾ, ಮುಖಂಡರಾದ ಮಲ್ಲಯ್ಯ, ಪರಮೇಶ್, ಪಪಂ ಸದಸ್ಯ ಸುರೇಶ್, ಡಿ.ಟಿ.ಗಳಾದ ಕುಬೇರ, ಸಣ್ಣರಾಮಪ್ಪ, ಆರ್‌ಐ ರಮೇಶ್, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ. ಚಾಮರಾಜ್, ಕೆ. ಹೊಲದಪ್ಪ, ಅನಿತಾ, ಎಇಇಗಳಾದ ಪ್ರಕಾಶ್, ರಘುನಂದನ್, ಜೆಇ ವರುಣ್ ಮತ್ತಿತರರು ಹಾಜರಿದ್ದರು.