Advertisement

ಹೆಬ್ರಿ: ನೀರು ಕೇಳುವ ನೆಪದಲ್ಲಿ ಸರ ಲೂಟಿ

12:03 AM Oct 12, 2019 | mahesh |

ಹೆಬ್ರಿ: ಅಪರಿಚಿತ ವ್ಯಕ್ತಿಯೊರ್ವ ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಯಲ್ಲಿದ್ದ ಮಹಿಳೆಯ ಕುತ್ತಿಗೆಯಿಂದ ಸುಮಾರು 65 ಸಾ. ರೂ. ಮೌಲ್ಯದ ಚಿನ್ನಾಭರಣ ದೋಚಿದ್ದು, ಆತ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಸೆರೆ ಸಿಕ್ಕಿದ ಘಟನೆ ಹೆಬ್ರಿ ರಾಗಿಹಕ್ಲು ಬಳಿ ಶುಕ್ರವಾರ ನಡೆದಿದೆ.

Advertisement

ಹೆಬ್ರಿ ಗ್ರಾಮದ ರಾಗಿಹಕ್ಲು ಶ್ರೀ ದೇವಿ ನಿಲಯದ 65 ವರ್ಷ ಪ್ರಾಯದ ಗುಲಾಬಿ ಆಚಾರ್ಯ ಅವರು ಶುಕ್ರವಾರ ಮನೆಯ ಮುಂದಿನ ಬಾಗಿಲನ್ನು ಹಾಕಿ ಹಿಂದಿನ ಬಾಗಿಲಿನ ಮೆಟ್ಟಲಿನಲ್ಲಿ ಒಬ್ಬರೇ ಕುಳಿತಿದ್ದರು. ಆಗ ಮಧ್ಯಾಹ್ನ ಸುಮಾರು 1.30ರ ಹೊತ್ತಿಗೆ ಓರ್ವ ಅಪರಿಚಿತ ಬಂದು ನೀರು ಕೇಳಿದ. ಮಹಿಳೆಯು ನೀರು ತರಲೆಂದು ಒಳಗೆ ಹೋದಾಗ ಈತನೂ ಮನೆಯೊಳಗೆ ಪ್ರವೇಶಿಸಿ ಕುತ್ತಿಗೆಯಲ್ಲಿದ್ದ ಸುಮಾರು ಎರಡು ಪವನ್‌ ತೂಕದ ಚಿನ್ನದ ನೆರಿಗುಂಡು ಸರವನ್ನು ಕಿತ್ತು ಪರಾರಿಯಾಗಿದ್ದಾನೆ. ಇದೇ ಹೊತ್ತಿಗೆ ಮನೆಗೆ ಆಗಮಿಸಿದ ಮಹಿಳೆಯ ಸೊಸೆ “ಕಳ್ಳ ಕಳ್ಳ’ ಎಂದು ಬೊಬ್ಬೆಹಾಕಿದ್ದು, ಸುತ್ತಮುತ್ತಲಿನವರು ಸೇರಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆತ ದ್ವಿಚಕ್ರ ವಾಹನದಲ್ಲಿ ಬಂದಿದ್ದರೆ ತಪ್ಪಿಸಿಕೊಳ್ಳುತ್ತಿದ್ದ. ಆದರೆ ನಡೆದುಕೊಂಡು ಬಂದಿದ್ದರಿಂದ ಸಿಕ್ಕಿಬಿದ್ದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸರ ಎಳೆಯುವ ಭರ ದಲ್ಲಿ ಗುಲಾಬಿಯವರ ಕುತ್ತಿಗೆ ತರಚಿದ ಗಾಯ ಹಾಗೂ ಎದೆಗೆ ನೋವು ಆಗಿದ್ದು, ಅವ ರಿಗೆ ಹೆಬ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಸಾಲದ ಕಾಟ ದಿಂದ ಕಳವು?
ಆರೋಪಿಯನ್ನು ನಾಡ್ಪಾಲು ಗ್ರಾಮದ ಮೇಗದ್ದೆ ನಿವಾಸಿ ಶ್ರೀಧರ್‌ ಎಂದು ಗುರುತಿಸಲಾಗಿದೆ. ಈತ ಹಲ ವೆಡೆ ಸಾಲ ಮಾಡಿದ್ದ ಎನ್ನಲಾಗಿದ್ದು, ಶನಿವಾರ 30 ಸಾ. ರೂ. ಕಟ್ಟ ಬೇಕಾಗಿತ್ತು. ಈತ ಹೆಂಡತಿಯೊಂದಿಗೆ ಹೆಬ್ರಿಗೆ ಬಂದಿದ್ದು, ಪತ್ನಿಯನ್ನು ಬಸ್ಸು ತಂಗುದಾಣದಲ್ಲಿ ಕುಳ್ಳಿರಿಸಿ “ಈಗ ಬರುತ್ತೇನೆ’ ಎಂದು ಹೇಳಿ ಹೋಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next