ಉತ್ತರ ಪ್ರದೇಶದ ಪೂರ್ವ ಭಾಗ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗಲಿದೆ. ಪಶ್ಚಿಮ ಬಂಗಾಲ, ತಮಿಳುನಾಡು, ಅಸ್ಸಾಂ, ಕರ್ನಾಟಕ ದಲ್ಲಿ ಗುರುವಾರ ಭಾರೀ ಮಳೆ ಯಾಗಲಿದೆ. ದಕ್ಷಿಣ ಮಹಾ ರಾಷ್ಟ್ರ-ಕೊಂಕಣ-ಗೋವಾ ಕರಾವಳಿ ಪ್ರದೇಶದಲ್ಲಿ ಗಂಟೆಗೆ 35ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಉತ್ತರ ಭಾರತದಲ್ಲಿ ಬಿಸಿ ಹವೆ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ.
Advertisement
ನಾಸಿಕ್‌ನಲ್ಲಿ ಬತ್ತಿದ ಜಲಾಶಯಗಳುತಾಪಮಾನ ಏರಿಕೆಯಿಂದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನೀರಿನ ಅಭಾವ ತಲೆದೋರಿದೆ. ಜಿಲ್ಲೆಯ 24 ಜಲಾಶಯಗಳ ಪೈಕಿ ಕನಿಷ್ಠ 8 ಜಲಾಶಯಗಳು ಬತ್ತಿ ಹೋಗಿವೆ. ಉಳಿದ 16 ಜಲಾಶಯ ಗಳಲ್ಲಿ 5.86 ಟಿಎಂಸಿ ನೀರು ಮಾತ್ರ ಉಳಿದಿದೆ ಎಂದು ಜಲ ಸಂಪನ್ಮೂಲ ಇಲಾಖೆ ತಿಳಿಸಿದೆ.