Advertisement
ದೇಶದಲ್ಲಿ ಮುಂದಿನವಾರದಿಂದ ಮಳೆಗಾಲ ಇಳಿಮುಖ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಮುಂದಿನ ವಾರದ ಅಂತ್ಯದಲ್ಲಿ ಪಶ್ಚಿಮ ರಾಜಸ್ಥಾನದಿಂದ ನೈಋತ್ಯ ಮಾನ್ಸೂನ್ ಇಳಿಮುಖ ಕಾಣಲಿದೆ. ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಈಗಾಗಲೇ ತಾಪಮಾನ ಏರಿಕೆ ಕಂಡುಬಂದಿದೆ ಎಂದು ತಿಳಿಸಿದೆ.
ಇಲಾಖೆ ಹೇಳಿದೆ. ಕೊಚ್ಚಿ ಹೋದ ಸೇತುವೆ: ಈ ನಡುವೆ, 1.42 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆಯೊಂದು ಉದ್ಘಾಟನೆಗೂ ಮುನ್ನವೇ ಕೊಚ್ಚಿಹೋದ ಘಟನೆ ಬಿಹಾರದಲ್ಲಿ ಶುಕ್ರವಾರ ನಡೆದಿದೆ. ಕಿಶನ್‌ಗಂಜ್ ಜಿಲ್ಲೆಯಲ್ಲಿ ಕಂಕಾಯಿ ನದಿಗೆ ನಿರ್ಮಿಸಲಾಗಿದ್ದ ಈ ಸೇತುವೆಯನ್ನು ಚುನಾವಣಾ ನೀತಿ ಸಂಹಿತೆ ಜಾರಿಗೆ ಮುನ್ನ ಲೋಕಾರ್ಪಣೆ ಮಾಡಲು ನಿರ್ಧರಿಸ ಲಾಗಿತ್ತು. ಆದರೆ, ಭಾರೀ ಮಳೆಯಿಂದಾಗಿ ಸೇತುವೆ ಕೊಚ್ಚಿ ಹೋಗಿದ್ದು, ಅದನ್ನು ನಿರ್ಮಿಸಿದ ಸಂಸ್ಥೆ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.