ಹುಣಸೂರು: ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು ಜೀವನದಿ ಲಕ್ಷಣತೀರ್ಥ ಮೈದುಂಬಿ ಹರಿಯುತ್ತಿದೆ. ಹನಗೋಡು ಹೋಬಳಿಯಲ್ಲೂ ಮಳೆಯ ಆರ್ಭಟಕ್ಕೆ ಹನಗೋಡು ಅಣೆಕಟ್ಟೆ ಮೇಲೆ 3 ಅಡಿಗಳಿಗೂ ಹೆಚ್ಚು ನೀರು ಹರಿಯುತ್ತಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಇರ್ಪು ಜಲಪಾತದಲ್ಲಿ ಹುಟ್ಟಿ ನಾಗರಹೊಳೆ ಉದ್ಯಾನವನದೊಳಗಿಂದ ಹರಿದು ಬರುವ ಲಕ್ಷ್ಮಣತೀರ್ಥ ನದಿ, ಹನಗೋಡು. ಹನುಮಂತಪುರ. ಉದ್ದೂರು ನಾಲೆ ಮೂಲಕ ಹುಣಸೂರು ಹಾಗೂ ಎಚ್.ಡಿ. ಕೋಟೆ ತಾಲೂಕಿನ ಕೆರೆ, ಕಟ್ಟೆಗಳನ್ನು ತುಂಬಿಸಿ 52 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಗಳಿಗೆ ನೀರಿನ ಮೂಲವಾಗಿದೆ.
ಹನಗೋಡು ನದಿಗೆ ಪಂಪ್ ಹೌಸ್ ಬಳಿ ಕಟ್ಟೆ ನಿರ್ಮಿಸಿ ನಗರದ ಕೆಲ ವಾಡ್೯ಗಳಿಗೂ ಕುಡಿಯುವ ನೀರು ಪೂರೈಸಲಾಗುತ್ತದೆ. ಹಾಗೂ ಕಟ್ಟೆ ಮಳಲವಾಡಿ ಸಿರಿಯೂರು ಬಳಿ ಕಟ್ಟೆ ನಿರ್ಮಿಸಿ ಆ ಭಾಗದ ನೂರಾರು ಎಕರೆಗೆ ನೀರುಣಿಸಲಾಗುತ್ತಿದೆ. ಮಾತ್ರವಲ್ಲದೆ ಕಿರಿಜಾಜಿ ಹಾಗೂ ಮರದೂರು ಮತ್ತು ಹೊಸರಾಮನಹಳ್ಳಿ ಗ್ರಾಮದ ಬಳಿಯಿಂದ ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ಏತ ನೀರಾವರಿ ಮೂಲಕ ಮೈಸೂರು ಹೆದ್ದಾರಿ ಬದಿಯ ಬಿಳಿಕೆರೆ. ಜೀನಹಳ್ಳಿ . ನಗರಕ್ಕೆ ಸಮೀಪದ ಮೂಕನಹಳ್ಳಿ ಬಳಿಯ ಮೂರು ಕೆರೆಗಳಿಗೆ ನೀರು ತುಂಬಿಸಿದ್ದರಿಂದಾಗಿ ಸುತ್ತಮುತ್ತಲ 10 ಕಿ.ಮೀ ಗೂ ಹೆಚ್ಚು ಪ್ರದೇಶದಲ್ಲಿ ಬರಿದಾಗಿದ್ದ ಬೋರ್ ವೆಲ್ ಗಳಲ್ಲಿ ಮತ್ತೆ ನೀರು ಸಿಗುತ್ತಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಶಾಸಕ ಎಚ್.ಪಿ.ಮಂಜುನಾಥ್ ಈ ಹಿಂದಿನ ಅವಧಿಯಲ್ಲಿ ಏತ ನೀರಾವರಿಗೆ ಒತ್ತು ನೀಡಿದ್ದರಿಂದ ಸುತ್ತಮುತ್ತಲ 10 ಕಿ.ಮೀಗೂ ಹೆಚ್ಚು ಪ್ರದೇಶದಲ್ಲಿ ಬರಿದಾಗಿದ್ದ ಬೋರ್ ವೆಲ್ ಗಳಲ್ಲಿ ಮತ್ತೆ ನೀರು ಹರಿಯುತ್ತಿದೆ.