Advertisement

Heavy Rain ಕುಳ: ಶೆಡ್‌ ಬಿದ್ದು 1,500 ಕೋಳಿಗಳು ಸಾವು

11:08 PM Jul 19, 2024 | Team Udayavani |

ವಿಟ್ಲ: ಭಾರೀ ಗಾಳಿ ಮಳೆಯಿಂದಾಗಿ ಕೋಳಿ ಶೆಡ್‌ ಕುಸಿದುಬಿದ್ದು ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃತ ಪಟ್ಟ ಘಟನೆ ಗುರುವಾರ ತಡರಾತ್ರಿ ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲಿನಲ್ಲಿ ಸಂಭವಿಸಿದೆ.

Advertisement

ರಾಘವ ಅವರ ಮಾಲಕ ತ್ವದ ಶೆಡ್‌ ಇದಾಗಿದ್ದು, ಅವರು ಸುಮಾರು 2,200 ಕೋಳಿಗಳನ್ನು ಸಾಕುತ್ತಿ ದ್ದರು. ಕೆಲವು ದಿನಗಳ ಹಿಂದೆ 700 ಕೋಳಿಗಳು ಮಾರಾಟ ವಾಗಿದ್ದವು. ಬಳಿಕ ಉಳಿದಿದ್ದ 1,500ರಷ್ಟು ಕೋಳಿ ಗಳು ಶೆಡ್ಡಿನ ಮೇಲ್ಛಾವಣಿಯಡಿ ಸಿಲುಕಿ ಮೃತಪಟ್ಟಿವೆ.

ಶೆಡ್‌ ಸಂಪೂರ್ಣ ನಾಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next