Advertisement
ತಾಲೂಕಿನಾದ್ಯಂತ ಮುಂಜಾನೆ ಬಿಸಿಲಿನ ವಾತಾವರಣ ಕಂಡುಬಂದರೆ, ಮಧ್ಯಾಹ್ನ ಬಳಿಕ ನಿರಂತರ ಮಳೆಯಾಗುತ್ತಿದೆ. ರವಿವಾರ ಸಂಜೆ ಸುಮಾರು 5 ಗಂಟೆಯಿಂದ ಧರ್ಮಸ್ಥಳ, ಉಜಿರೆ, ಮುಂಡಾಜೆ ಸಹಿತ ತಾಲೂಕಿನಾದ್ಯಂತ ಹಲವಡೇ ತಾಸುಗಟ್ಟಲೆ ಭಾರೀ ಮಳೆ ಸುರಿದಿದೆ.
ಮಂಗಳೂರು: ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ರವಿವಾರ ಸಂಜೆ ಬಳಿಕ ಮಳೆಯಾಗಿದೆ. ಮಂಗಳೂರು, ಬೆಳ್ತಂಗಡಿ ತಾಲೂಕಿನ ಹಲವು ಕಡೆಗಳಲ್ಲಿ ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಅ.14ರಿಂದ 16ರ ವರೆಗೆ ಎಲ್ಲೋ ಅಲರ್ಟ್ ಮತ್ತು ಅ.17ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಮಳೆ ಸುರಿಯುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ 31.2 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.2 ಡಿ.ಸೆ. ಏರಿಕೆ ಮತ್ತು 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.3 ಡಿ.ಸೆ. ಏರಿಕೆ ಕಂಡಿತ್ತು.