Advertisement
ಶಂಕನರಾಯಣ ಗ್ರಾಮದ ಅರಣ್ಯ ಇಲಾಖೆಯ ಅಧಿಕಾರಿಗಳ ಕಚೇರಿ ಬಳಿ ನಿಲ್ಲಿಸಿದ್ದ ಸ್ಥಳೀಯ ಹೊಟೇಲ್ ಮಾಲಕ ಮನೀಶ್ ಶೆಟ್ಟಿಯವರ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.
ಮಾವಿನಕೊಡ್ಲುವಿನ ಜ್ಯೋತಿ ಅವರ ಮನೆಗೆ ಸಿಡಿಲು ಬಡಿದಿದ್ದು ಅವರ 17 ವರ್ಷದ ಪುತ್ರ ಗಾಯಗೊಂಡಿದ್ದು, ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
Related Articles
ಭಾರೀ ಮಳೆ
ಸೋಮವಾರ ರಾತ್ರಿಯಿಡೀ ಕುಂದಾಪುರ-ಬೈಂದೂರು ತಾಲೂಕಿ ನಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ಗಾಳಿಯ ಅಬ್ಬರವೂ ಜೋರಿತ್ತು. ಗಾಳಿ – ಮಳೆಯಿಂದಾಗಿ ಹಲವೆಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲವು ಕಡೆ ರಾತ್ರಿ ಸ್ಥಗಿತಗೊಂಡಿದ್ದ ವಿದ್ಯುತ್ ಮಂಗಳವಾರ ಬೆಳಗ್ಗೆಯಷ್ಟೇ ಬಂದಿತ್ತು.
Advertisement
ಹಾಲಾಡಿ ಪರಿಸರದಲ್ಲಿ ಭಾರೀ ಮಳೆಮಂಗಳವಾರ ಸಂಜೆ ಬಳಿಕ ಹಾಲಾಡಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಭಾರೀ ಮಳೆ ಸುರಿದಿದೆ. ರಾತ್ರಿ 9 ಗಂಟೆಯಿಂದ 10.30ರ ವರೆಗೆ ನಿರಂತರ ಮಳೆ ಸುರಿದ ಪರಿಣಾಮ ಕೆಲವೆಡೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಗಾಳಿಯೂ ಇದ್ದುದರಿಂದ ಕೆಲವೆಡೆ ಮರ ಬಿದ್ದು ಸಣ್ಣ ಪುಟ್ಟ ಹಾನಿಗಳಾಗಿವೆ. ಉಡುಪಿ, ಕಾರ್ಕಳ ಮಳೆ ಇಳಿಮುಖ
ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ಸೋಮವಾರಕ್ಕೆ ಹೋಲಿಸಿದರೆ ಮಳೆ ಪ್ರಮಾಣ ಸಾಕಷುc ಇಳಿಕೆಯಾಗಿತ್ತು. ಹಗಲಿನಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣ ಇತ್ತು. ಉಡುಪಿಯಲ್ಲಿ ಸೋಮವಾರ ರಾತ್ರಿ ಗುಡುಗು ಮಿಂಚಿನೊಂದಿಗೆ ಭಾರೀ ಮಳೆ ಸುರಿದಿತ್ತು. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕಾರ್ಕಳ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಮಂಗಳವಾರ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಹಗಲಿನಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು.