Advertisement

Bantwal: ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಜೀಪು ಢಿಕ್ಕಿ; ಪಾರಾದ ಮಕ್ಕಳು

01:13 AM Oct 10, 2024 | Team Udayavani |

ಬಂಟ್ವಾಳ: ಮೆಲ್ಕಾರ್‌- ಮುಡಿಪು ರಸ್ತೆಯ ಸಜೀಪನಡು ಜಂಕ್ಷನ್‌ನಲ್ಲಿ ಜೀಪೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ.

Advertisement

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳು ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಹಲವು ವಾಹನಗಳು ಜಖಂಗೊಂಡಿದೆ.

ಮುಡಿಪು ಭಾಗದಿಂದ ಮೆಲ್ಕಾರಿನತ್ತ ಆಗಮಿಸುವ ಜೀಪು ವೇಗವಾಗಿ ಬಂದು ರಸ್ತೆ ಬಿಟ್ಟು ತೀರಾ ಎಡಕ್ಕೆ ಚಲಿಸಿ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಘಟನೆಯ ಸಿಸಿ ಟಿವಿ ದೃಶ್ಯ ವೈರಲ್‌ ಆಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next