ಶಹಾಬಾದ: ಹೋಬಳಿ ವಲಯದಲ್ಲಿ ಮಂಗಳವಾರ ಹಾಗೂ ಬುಧವಾರ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತರುವುದರಿಂದ ಕಾಗಿಣಾ ನದಿ ಉಕ್ಕಿ ಹರಿಯುತ್ತಿದೆ.
ಮುತ್ತಗಾ ಗ್ರಾಮದ ಬ್ರಿಡ್ಜ್ ಕಮ್ ಬ್ಯಾರೇಜ್ (ಸೇತುವೆ) ಮುಳುಗಡೆಯಾಗಿ ಅದರ ಮೇಲೆ ಸುಮಾರು 2ಅಡಿ ನೀರು ಬಂದಿದೆ. ಇದರ ಪರಿಣಾಮವಾಗಿ ಸಂಚಾರ ಸ್ಥಗಿತಗೊಂಡು ಮುತ್ತಗಾದಿಂದ ಜಿವಣಗಿ, ಕದ್ದರಗಿ, ಶಂಕರವಾಡಿ ಹಾಗೂ ಚಿತ್ತಾಪುರ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಪರದಾಡುವಂತಾಯಿತು.ಸೇತುವೆಯಿಂದ ಸುಮಾರು ಅರ್ಧ ಕಿಮೀ ವರೆಗೆ ನೀರು ರಸ್ತೆ ಮತ್ತು ಹೊಲ-ಗದ್ದೆಗಳಲ್ಲಿ ನೀರು
ಆವರಿಸಿಕೊಂಡಿದೆ.
ಗುಡುಗು ಸಹಿತ ಸುರಿದ ಭಾರಿ ಮಳೆಯಿಂದ ನದಿ ಪಾತ್ರದ ಸುಮಾರು ಸಾವಿರಾರು ಎಕೆರೆ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆ ಪ್ರಭಾವದಿಂದ ಆಶ್ರಯ ಕಾಲೋನಿಯಲ್ಲಿ ರಸ್ತೆಗಳು ಕೆಸರು ಗದ್ದೆಯಾಗಿವೆ. ಇದರಿಂದ ಇಲ್ಲಿನ ಜನರು ಸಂಚರಿಸಲು ತೊಂದರೆಪಡಬೇಕಾದ ಪರಿಸ್ಥಿತಿ ಉಂಟಾಯಿತು. ಅಲ್ಲದೇ ಮಿಲತ್ ನಗರದಲ್ಲಿ ಚರಂಡಿ ವ್ಯವಸ್ಥಡಯಿಲ್ಲದ ಪರಿಣಾಮ ನೀರು ಬಡಾವಣೆಗಳಲ್ಲಿ ಆವರಿಸಿಕೊಂಡು ಜನರು ಕಷ್ಟ ಅನುಭವಿಸಬೇಕಾಯಿತು.ಅಲ್ಲದೇ ಅದೇ ನೀರಿನಲ್ಲಿ ಮಕ್ಕಳು ಆಟವಾಡುವ ದೃಶ್ಯ ಕಂಡು ಬಂತು.