Advertisement

3 ದಿನ ಭಾರೀ ಮಳೆ : ಒಡಿಶಾ, ಆಂಧ್ರ, ಬಂಗಾಲಕ್ಕೆ ಅಸಾನಿ ಪರಿಣಾಮ

12:32 AM May 09, 2022 | Team Udayavani |

ಹೊಸದಿಲ್ಲಿ: ಬಂಗಾಲಕೊಲ್ಲಿಯ ಆಗ್ನೇಯ ಭಾಗದಲ್ಲಿ ಎದ್ದಿರುವ ಅಸಾನಿ ಚಂಡ ಮಾರುತವು ರವಿವಾರ ಸಂಜೆಯ ವೇಳೆ ತೀವ್ರತೆ ಪಡೆದಿದ್ದು, ಉತ್ತರ ಆಂಧ್ರ ಪ್ರದೇಶ-ಒಡಿಶಾ ಕರಾವಳಿಯತ್ತ ಸಂಚರಿ ಸಲಾರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Advertisement

ಚಂಡಮಾರುತದ ಎಫೆಕ್ಟ್ ಎಂಬಂತೆ ಆಂಧ್ರಪ್ರದೇಶ, ಪಶ್ಚಿಮ ಬಂಗಾಲ, ಒಡಿ ಶಾಗಳಲ್ಲಿ ಮಂಗಳವಾರದಿಂದ ಗುರುವಾರದ ವರೆಗೂ ಭಾರೀ ಮಳೆಯಾಗುವ ಸಾಧ್ಯತೆ ಯಿದೆ. ಹೀಗಾಗಿ ಈ ರಾಜ್ಯಗಳ ಹಲವು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ ಎಂದೂ ಇಲಾಖೆ ತಿಳಿಸಿದೆ.

ಚಂಡಮಾರುತವು ಒಡಿಶಾ ಅಥವಾ ಆಂಧ್ರ ಕರಾವಳಿಗೆ ಅಪ್ಪಳಿಸುವುದಿಲ್ಲ. ಬದ ಲಿಗೆ, ಪೂರ್ವ ಕರಾವಳಿಗೆ ಸಮಾನಾಂತರ ವಾಗಿ ಹಾದುಹೋಗಲಿದೆ. ಹೀಗಾಗಿ ಮಳೆ ಮಾತ್ರ ಭರ್ಜರಿಯಾಗಿಯೇ ಸುರಿಯಲಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಮೂರೂ ರಾಜ್ಯಗಳಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತೀರ ಪ್ರದೇಶಗಳ ಹಲವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಎನ್‌ಡಿಆರ್‌ಎಫ್ ಹಾಗೂ ರಾಜ್ಯ ವಿಪತ್ತು ಪಡೆಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

ಬನ್ಸ್‌ವಾರಾ ಗರಿಷ್ಠ ತಾಪಮಾನ 46.5 ಡಿ.ಸೆ.
ಉತ್ತರಭಾರತದಾದ್ಯಂತ ಬಿಸಿಗಾಳಿಯ ತೀವ್ರತೆ ಮುಂದುವರಿದಿದೆ. ರಾಜ ಸ್ಥಾನದ ಬಹುತೇಕ ಭಾಗಗಳಲ್ಲಿ ಬಿಸಿಲಿನ ಝಳದಿಂದ ಜನರು ತತ್ತರಿಸಿದ್ದಾರೆ. ರವಿವಾರ ಬನ್ಸ್‌ವಾರಾದಲ್ಲಿ ಗರಿಷ್ಠ ತಾಪಮಾನ 46.5 ಡಿ.ಸೆ. ಆಗಿದ್ದು, ರಾಜ್ಯದಲ್ಲೇ ಅತ್ಯಂತ ತಾಪದ ಪ್ರದೇಶ ಎಂದು ಕರೆಯಲ್ಪಟ್ಟಿದೆ. ಬಿಕಾನೇರ್‌, ಶ್ರೀ ಗಂಗಾನಗರ, ಜೈಸಲ್ಮೇರ್‌ನಲ್ಲಿ 45.5 ಡಿ.ಸೆ. ತಾಪಮಾನ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next