Advertisement

ಹಿಂಗಾರು ಕೃಷಿ ಚಟುವಟಿಕೆಗೆ ಹಿನ್ನಡೆ : ಬಿತ್ತನೆ ಕಾರ್ಯಕ್ಕೆ ಮುಂದಾಗದ ಅನ್ನದಾತರು

02:54 PM Sep 24, 2020 | sudhir |

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಮಳೆಯಿಂದಾಗಿ ಎರಿ ಭೂಮಿಯಲ್ಲಿ ನೀರು ನಿಂತು ಹಿಂಗಾರು ಕೃಷಿ ಚಟುವಟಿಕೆ ಹಿನ್ನಡೆ ಅನುಭವಿಸುವಂತಾಗಿದೆ.

Advertisement

ಗಜೇಂದ್ರಗಡ ತಾಲೂಕಿನಾದ್ಯಾಂತ ಕಳೆದೊಂದು ವಾರದಿಂದ ಈ ಭಾಗದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದೆ. ಹಳ್ಳ ಕೊಳ್ಳಗಳು ಹರಿಯುತ್ತಿವೆ. ಆದರೆ ಅಕ್ಟೋಬರ್‌ ತಿಂಗಳ ಮೊದಲ ಮತ್ತು ಎರಡನೆ ವಾರದಲ್ಲಿಯೇ ಬಿತ್ತನೆ ಕಾರ್ಯ ಪೂರ್ಣಗೊಳಿಸಬೇಕಿದ್ದ ಅನ್ನದಾತರಿಗೆ ಮಳೆರಾಯ ಬೆಂಬಿಡದೇ ಕಾಡುತ್ತಿದ್ದಾನೆ. ಮಳೆಯಿಂದಾಗಿ ಕಪ್ಪು ಭೂಮಿಯಲ್ಲಿ ಬಿತ್ತನೆಗೆ ಯೋಗ್ಯವಲ್ಲದಂತೆ ನೀರು ತುಂಬಿಕೊಂಡಿದೆ. ಈ ಮದ್ಯೆ ವರುಣದೇವ ಕೊಂಚ ವಿರಾಮ ನೀಡಿದ್ದನು. ಆ ಸಂದರ್ಭದಲ್ಲಿ ರೈತರು ಬಿತ್ತನೆಗೆ ಭೂಮಿಯನ್ನು ಹದವನ್ನಾಗಿಸಿಕೊಂಡಿದ್ದರು. ಆದರೆ ಮತ್ತೆ ಮಳೆ ಸುರಿದಿದ್ದರಿಂದ ಜಮೀನಿನಲ್ಲಿ ನೀರು ನಿಂತು ಸಂಪೂರ್ಣ ಕೆಸರುಮಯವಾಗಿದೆ.

ಇದನ್ನೂ ಓದಿ : ತುಂಗಭದ್ರಾ ನದಿಗೆ ನಿರ್ಮಿಸಿದ್ದ ರಸ್ತೆ ಮೇಲ್ಸೇತುವೆ ಕುಸಿತ ; ಆತಂಕದಲ್ಲಿ ವಾಹನ ಸವಾರರು

ಮಳೆರಾಯನ ಕಣ್ಣಾಮುಚ್ಚಾಲೆ: ಈಗಾಗಲೇ ಹಿಂಗಾರು ಬಿತ್ತನೆ ಮಾಡಬೇಕೆಂದು ಬಿಳಿಜೋಳ, ಕಡಲೆ, ಗೋಧಿ ಬೀಜಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಆದರೆ ಮಳೆ ನಿಲ್ಲುತ್ತಿಲ್ಲ. ಕಳೆದೊಂದು ವಾರದಿಂದ ಹೀಗೆ ವರುಣದೇವನ ಕಣ್ಣಾಮುಚ್ಚಾಲೆಯಿಂದಾಗಿ ಹಿಂಗಾರು ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಈಗಾಗಲೇ ಹಿಂಗಾರು ಬಿತ್ತನೆಯ ಅವಧಿ  ಪ್ರಾರಂಭವಾಗಿದ್ದರೂ ಈವರೆಗೂ ತಾಲೂಕಿನ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿಲ್ಲ. ರೈತರಿಗೆ ಹಸಿಯಾಗಿರುವ ಭೂಮಿ ಶಾಪವಾಗಿ ಪರಿಣಮಿಸಿದೆ.
ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗುವ ಸಮಯಕ್ಕೆ ಸರಿಯಾಗಿ ಮೇಘರಾಜನ ಆರ್ಭಟವೂ ಹೆಚ್ಚಿದ್ದರಿಂದ ಈ ಬಾರಿ ಬಿತ್ತನೆಗೆ ಹಿನ್ನಡೆಯಾಗಬಹುದು ಎನ್ನುವುದು ರೈತರ ಮಾತಾಗಿದೆ. ಹಿಂಗಾರು ಬಿತ್ತನೆ ಸಮಯಕ್ಕೆ ಸುರಿದ ಮಳೆಯಿಂದ ಶೇ. 100ರಷ್ಟು ಉತ್ತಮ ಫಸಲು ಬರುವುದು ಈ ವರ್ಷದ ಹಿಂಗಾರಿನಲ್ಲಿ ಕಷ್ಟಸಾಧ್ಯ ಎಂಬಂತಾಗಿದೆ.

ಹಿಂಗಾರು ಬಿತ್ತನೆಗೆ ಇನ್ನು ಅವಕಾಶವಿದೆ. ಆದರೆ ಹೊಲದ ತುಂಬಾ ನೀರು ನಿಂತು ಕೆಸರು ಗದ್ದೆಯಾಗಿದೆ. ಭೂಮಿ ಒಣಗಬೇಕಾದರೆ ಕನಿಷ್ಠ 10 ದಿನವಾದರೂ ಬೇಕು. ಮಳೆ ಕರುಣೆ ತೋರಿದರೆ ಹಿಂಗಾರಿಯಲ್ಲಾದರೂ ಬದಕ್ತಿವಿ.
– ಮಾರುತೆಪ್ಪ ಕುಂಬಾರ, ರೈತ

Advertisement
Advertisement

Udayavani is now on Telegram. Click here to join our channel and stay updated with the latest news.

Next