Advertisement
ಪಟ್ಟಣದ ವಾಲ್ಮೀಕಿ ನಗರ, ಕೊಟ್ಟೂರು ಆಶ್ರಯ ಕಾಲೋನಿ, ಆಂಜನೇಯ ಬಡಾವಣೆ, ಗೋಕರ್ಣೇಶ್ವರ ದೇವಸ್ಥಾನದ ಆವರಣದೊಳಗೆ ನೀರು ನುಗ್ಗಿತು. ಆದರೆ ಯಾವುದೇ ಹಾನಿಸಂಭವಿಸಿಲ್ಲ. ಸತತ 3 ಗಂಟೆಗೆಗೂ ಹೆಚ್ಚು ಸಮಯ ಮಳೆ ಬಿದ್ದ ಪರಿಣಾಮ ಪಟ್ಟಣದ ಹೊಂಡ, ಗುಂಡಿ, ರಸ್ತೆಯ ಇಕ್ಕೆಲಗಳಲ್ಲಿ ನೀರು ನಿಂತುಕೊಂಡಿತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ನಗರದ ಎಲ್ಲ ರಸ್ತೆಗಳಲ್ಲಿ ನೀರು ಹರಿಯುವ ದೃಶ್ಯ ಕಂಡು ಬಂತು. ಕೆಲವು ಕಡೆಗಳಲ್ಲಿ ರಸ್ತೆಯಲ್ಲೇ ನೀರು ನಿಂತ್ತಿರುವುದರಿಂದ ಸಂಚಾರಕ್ಕೆ ತೊಡಕು ಉಂಟು ಮಾಡಿತು. ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಗಾಳಿಗೆ ಕೆಲವು ಕಡೆಗಳಲ್ಲಿ ಮನೆ ಮೇಲ್ಛಾವಣೆ ಹಾರಿ ಹೋಗಿವೆ. ಅರಸೀಕೆರೆ ಹೋಬಳಿಯ ಗಡಿಗುಡಾಳು ಗ್ರಾಮದಲ್ಲಿ 15 ಮನೆಗಳಿಗೆ
ನೀರು ನುಗ್ಗಿದೆ. ಹರಪನಹಳ್ಳಿ ಕಸಾಬಾ-84.4 ಮೀ.ಮೀ, ಅರಸೀಕೇರಿ ಹೋಬಳಿ-70.2,. ಚೀಗಟೇರಿ ಹೋಬಳಿ-30, ಹಿರೆಮೇಗಳಗೇರಿ-20, ಉಚ್ಚಂಗಿದುರ್ಗ-33.8, , ತೆಲಿಗಿ 18.2, ಹಲವಾಗಲು 48.2 ಮೀ.ಮೀ ಮಳೆಯಾಗಿದೆ.