Advertisement
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರ ಮಳೆ ಹೆಚ್ಚಿದ್ದರಿಂದ ಅಡಿಕೆ, ಕಾಫಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಇದು ಅಡಿಕೆ ಕೊçಲು, ಒಣಗಿಸುವ ಮತ್ತು ಸುಲಿಯುವ ಸಮಯ. ಇನ್ನೂ ಮೂರ್ನಾಲ್ಕು ದಿನ ಮೋಡ ಮತ್ತು ಮಳೆಯ ವಾತಾವರಣ ಇರುವುದರಿಂದ ಅಡಿಕೆ ಒಣಗಿಸಲು ಭಾರೀ ಸಮಸ್ಯೆಯಾಗಲಿದೆ. ಜತೆಗೆ ಮಳೆ ನೀರು ಹಿಂಗಾರ, ಎಳೆಸೋಗೆಗಳ ಬುಡದಲ್ಲಿ ನಿಂತು ಬಿಸಿಲಿಗೆ ಬಿಸಿಯಾಗುವುದರಿಂದಲೂ ಅಡಿಕೆ ಮರಗಳಿಗೆ ಹಾನಿಯಾಗುತ್ತದೆ.
ಕಾಫಿ ಕೊಯ್ಲು ಆರಂಭವಾಗಿದ್ದು, ಒಣಗಲು ಹಾಕಿದ್ದ ಕಾಫಿ ಬೀಜಗಳು ತೋಯ್ದಿವೆ. ಕಟಾವಿಗೆ ಬಾಕಿಯಿರುವ ಬೀಜಗಳೂ ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದಲ್ಲಿ ತೊಗರಿ ಸುಗ್ಗಿ ಆರಂಭವಾಗಿದೆ. ಕಲಬುರಗಿ, ಯಾದಗಿರಿ, ವಿಜಯಪುರ ಮತ್ತಿತರ ಕಡೆ ಮೋಡ ಕವಿದ ವಾತಾವರಣ ತೊಗರಿ ಕಟಾವಿಗೆ ಸಮಸ್ಯೆ ಉಂಟು ಮಾಡಿದೆ.