Advertisement

ಬೆಳ್ತಂಗಡಿ, ಬೆಳ್ಳಾರೆಯಲ್ಲಿ ಧಾರಾಕಾರ ಮಳೆ

07:34 PM Oct 04, 2021 | Team Udayavani |

ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಮುಂಡಾಜೆಯ ಧೂಂಬೆಟ್ಟು, ಕಜೆ ಸೋಮಂತಡ್ಕ ಪರಿಸರದಲ್ಲಿ ಗುಡುಗು ಸಹಿತ ಮಳೆಯ ಜತೆ ಗಾಳಿಯೂ ಬೀಸಿದ್ದು ಕೆಲವು ತೋಟಗಳಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ. ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳ ನೀರಿನ ಹರಿವು ಹೆಚ್ಚಾಗಿದೆ.

Advertisement

ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಲವಂತಿಗೆ, ದಿಡುಪೆ ಪರಿಸರಗಳಲ್ಲಿ ಭಾರೀ ಮಳೆ ಸುರಿದಿದೆ. ಕಡಿರುದ್ಯಾವರ ಗ್ರಾಮದ ಎರ್ಮಾಲ್‌ ಫ‌ಲ್ಕೆಯ ಬೈಲು ಹಳ್ಳದಲ್ಲಿ ಭಾರೀ ಪ್ರಮಾಣದ ನೀರು ಹರಿದು ಸಮೀಪದ ಕೃಷಿ ತೋಟ ಹಾಗೂ ಗದ್ದೆಗಳಿಗೆ ನೀರು ನುಗ್ಗಿತ್ತು. ತೋಟತ್ತಡಿ ತಗ್ಗಿನ ಪ್ರದೇಶಗಳಿಗೆ ನೀರು ನುಗಿದೆ.

ಸೋಮವಾರವಾದ್ದರಿಂದ ಬೆಳ್ತಂಗಡಿ ಪೇಟೆಯಲ್ಲಿ ಅಧಿಕ ವಾಹನ ದಟ್ಟಣೆ ಇದ್ದು, ಜತೆಗೆ ಮಳೆಯೂ ಸುರಿದದ್ದರಿಂದ ಟ್ರಾಫಿಕ್‌ ಕಿರಿಕಿರಿ ಉಂಟಾಗಿತ್ತು.

ಇದನ್ನೂ ಓದಿ:8ರಂದು ರಾಷ್ಟ್ರಪತಿ ಆಗಮನ: ಹೆಲಿಪ್ಯಾಡ್‌ಗೆ ಸಿದ್ಧತೆ

ವಿದ್ಯುತ್‌ ಕಂಬಕ್ಕೆ ಹಾನಿ, ಕೃತಕ ನೆರೆ
ಬೆಳ್ಳಾರೆ/ಪುತ್ತೂರು: ಬೆಳ್ಳಾರೆ, ಇಂದ್ರಾಜೆ, ಕಲ್ಮಡ್ಕ ಸಹಿತ ವಿವಿಧ ಭಾಗಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದೆ. ಕೆಲವೆಡೆ ಹಾನಿ ಸಂಭವಿಸಿದೆ. ನಿಂತಿಕಲ್ಲು ಬೆಳ್ಳಾರೆ ರಸ್ತೆಯ ಮರುವಂಜ ಸಮೀಪ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿ ವಾಹನ ಸವಾರರು ಸಂಚಾರಕ್ಕೆ ಪರದಾಡಿದರು. ಮುಪ್ಪೇರ್ಯ ಗ್ರಾಮದ ಇಂದ್ರಾಜೆಯಲ್ಲಿ ಭಾರೀ ಗಾಳಿಗೆ ಮರವೊಂದು ವಿದ್ಯುತ್‌ ಲೈನಿಗೆ ಬಿದ್ದ ಪರಿಣಾಮವಾಗಿ ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ ರಸ್ತೆಗೆ ಬಿದ್ದು ತಾಸು ಕಾಲ ಸಂಚಾರ ಸ್ಥಗಿತಗೊಂಡಿತು. ವಿವಿಧೆಡೆ ತೋಟಗಳಲ್ಲೂ ಹಾನಿ ಸಂಭವಿಸಿದೆ. ಪುತ್ತೂರು ನಗರದಲ್ಲಿ ಸಾಧಾರಣ, ಗ್ರಾಮಾಂತರದ ಸ್ವಲ್ಪ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next