ನೆಲಮಂಗಲ: ನಿರಂತರ ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತರಿಗೆ ಮತ್ತೆ ಆರಂಭವಾಗಿರುವ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಾಲೂಕಿನಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದ ಇತ್ತೀಚಿಗೆ ರಾಗಿ, ಜೋಳ ಕಟಾವು ಮಾಡಿದ ಹೊಲದಲ್ಲಿ ನೀರು ನಿಂತು ಬಹಳಷ್ಟು ಸಮಸ್ಯೆಯಾಗಿದ್ದು ಅಲ್ಪಸ್ವಲ್ಪ ಕೈ ಸಿಗುತ್ತಿದ್ದ ರಾಗಿ,ಜೋಳ ಕೂಡ ನೀರು ಪಾಲಾಗಿದ್ದು ರೈತರು ಕಂಗಾಲಾಗುವಂತೆ ಮಾಡಿದೆ.
ಕೆರೆಕುಂಟೆಗೆ ನೀರು: ಒಂದು ವಾರಗಳ ಕಾಲ ಸುರಿದ ನಿರಂತರ ಮಳೆಯಿಂದ ತಾಲೂಕಿನ ಬಹುತೇಕ ಕೆರೆಗಳು ಕೋಡಿಬಿದ್ದು ಅನೇಕ ಸಮಸ್ಯೆಗಳನ್ನು ಸೃಷ್ಟಿಯಾಗಿತ್ತು. ಈಗ ಮತ್ತೆ ಧಾರಕಾರ ಮಳೆಯಾಗಿದ್ದು ಕೆರೆಕುಂಟೆಗಳು ಹೊಡೆಯುವ ಆತಂಕ ಎದುರಾಗಿದ್ದು, ಕೆರೆಗಳ ದಡಗಳನ್ನು ಪರಿಶೀಲನೆ ಮಾಡಲು ಅಧಿಕಾರಿಗಳು ತಂಡ ಮುಂದಾಗಬೇಕು ಎಂದು ಸ್ಥಳೀಯ ಜನರು ಒತ್ತಾಯ ಮಾಡಿದ್ದಾರೆ.
ಜನಜೀವನ ಅಸ್ತವ್ಯಸ್ತ:
ದಿಢೀರ್ ಧಾರಕಾರ ಮಳೆ ಸುರಿದ ಪರಿಣಾಮ ನಗರದಲ್ಲಿ ಶುಕ್ರವಾರದಂದು ನಡೆಯುವ ಸಂತೆಯಲ್ಲಿ ವ್ಯಾಪಾರಿಗಳು ಹಾಗೂ ಜನರು ಪರಾದಾಡಿದ್ದು ಸಂತೆಯ ತರಕಾರಿ, ವಿವಿಧ ವಸ್ತುಗಳು ನೀರುಪಾಲಾಯಿತು. ಶಾಲಾಕಾಲೇಜು ವಿದ್ಯಾರ್ಥಿಗಳು ಮನೆಗೆ ತೆರಳಲು ಪರಾದಾಡಿದರೆ ನಗರಕ್ಕೆ ಬಂದಿದ್ದ ಜನರು ಮಳೆಯಿಂದ ಹೈರಾಣಾದರು.
ಮನೆ ಕುಸಿತದ ಆತಂಕ: ಗ್ರಾಮೀಣ ಪ್ರದೇಶದ ಮಣ್ಣಿನ ಮನೆಗಳು ಮಳೆಯ ಅಬ್ಬರಕ್ಕೆ ಸಿಲುಕಿ ಕುಸಿಯುವ ಹಂತ ತಲುಪಿದ್ದು ಬಹಳಷ್ಟು ಜನರು ಮನೆ ಕಳೆ ದುಕೊಳ್ಳವ ಆತಂಕ ಎದುರಾಗಿದೆ. ತಾಲೂಕಿನ ಕೆಲವು ಗ್ರಾಮಗಳಲ್ಲಿ ಮರಗಳು ಮುರಿದು ಹೋಗಿದ್ದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : “ಅನಾಥ’ ವಾಹನಗಳ ವಿರುದ್ಧ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರಿಂದ ಜಂಟಿ ಆಪರೇಷನ್