ರಾಯಚೂರು: ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಭಾರಿ ಗುಡುಗು ಸಿಡಿಲಾರ್ಭಟದ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ವಿವಿಧ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನ ಜಾಗರಣೆ ಮಾಡುವಂತಾಯಿತು. ತಡರಾತ್ರಿ ಶುರುವಾದ ಮಳೆ ಸತತ 3 ರಿಂದ 4 ಗಂಟೆ ವರೆಗೂ ಸುರಿದಿದೆ. ಇದರಿಂದ ಚರಂಡಿಗಳನ್ನು ತುಂಬಿ ಕೊಚ್ಚೆ ನೀರು ಮಳೆನೀರು ಸೇರಿಕೊಂಡು ಮನೆಗಳಿಗೆ ನುಗ್ಗಿದೆ.
ನಗರದ ಸಿಯಾತಲಾಬ್ ಬಡಾವಣೆಯಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ಪಾತ್ರ ಪಗಡೆಗಳು, ಬಟ್ಟೆ ಸೇರಿದಂತೆ ಮನೆ ಸಾಮಗ್ರಿಗಳೆಲ್ಲ ನೀರಿನಲ್ಲಿ ತೇಲಾಡುತ್ತಿದ್ದವು. ನಿವಾಸಿಗಳು ನೀರು ಹೊರಹಾಕುತ್ತಲೇ ಬೆಳಕು ಹರಿಸಿದರು. ಆದರೂ ನೀರು ಮನೆಗೆ ನುಗ್ಗುತ್ತಲೇ ಇತ್ತು. ಪ್ರತಿಬಾರಿ ಮಳೆ ಬಂದಾಗ ಈ ಸಮಸ್ಯೆ ಎದುರಾಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ನಶೆ ನಂಟು: ನಿರ್ಮಾಪಕ ಇಮ್ತಿಯಾಜ್ ಖತ್ರಿ ಮನೆಗೆ ಎನ್ ಸಿಬಿ ದಾಳಿ
ಗ್ರಾಮೀಣ ಭಾಗದಲ್ಲಿ ಕೂಡ ಭಾರಿ ಮಳೆಯಾಗಿದೆ. ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅಲ್ಲಲ್ಲಿ ಸಿಡಿಲು ಬಡಿದಿದ್ದು, ಅನಾಹುತ ಸಂಭವಿಸಿದ ಮಾಹಿತಿ ತಿಳಿದು ಬಂದಿಲ್ಲ.