Advertisement
ಬಡಕೋಡಿ ಗ್ರಾಮದ ಕೀರ್ತಿ ಜೈನ್ ಅವರ ಮನೆಯ ಎದುರಿನ ಸಿಮೆಂಟ್ ಶೀಟ್, ಹೆಂಚುಗಳು ಹಾರಿಹೋಗಿವೆ. ಅವರು ಮನೆಯಲ್ಲೇ ಕ್ಯಾಟರಿಂಗ್ ಅಡುಗೆ ಮಾಡುತ್ತಿದ್ದು ಅಡುಗೆ ಸಾಮಗ್ರಿಗಳಿಗೆ ಹಾನಿಯಾಗಿದೆ.
ರಾಘವೇಂದ್ರ ನಾಯ್ಕ, ಗೋಪಾಲ ಪೂಜಾರಿ ಬಡಕೋಡಿ, ರಾಘವೇಂದ್ರ ನಡ್ತಿಕಲ್ಲು ಅವರ ಮನೆಗಳಿಗೂ ಅಪಾರ ಪ್ರಮಾಣದ ಹಾನಿಯಾಗಿದೆ. ಪ್ರಶಾಂತ್ ನಡ್ತಿಕಲ್ಲು ಅವರ ಮನೆ ಮೇಲೆ ವಿದ್ಯುತ್ ಕಂಬ ಉರುಳಿಬಿದ್ದು ಹಾನಿಯಾಗಿದೆ.
ಬಡಕೋಡಿ ಪರಿಸರದ ಹಲವು ಮನೆಗಳ ಅಡಿಕೆ ತೋಟ, ರಬ್ಬರ್ ಮರಗಳು, ಪಂಪ್‌ಶೆಡ್, ತೆಂಗಿನ ಮರಗಳೂ ಉರುಳಿ ಬಿದ್ದು ರೈತರಿಗೆ ನಷ್ಟ ಸಂಭವಿಸಿದೆ. ಬಾಳೆಗಿಡಗಳು, ತರಕಾರಿ ಕೃಷಿಗಳು ನಾಶವಾಗಿವೆ. ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆಲಿಕಲ್ಲು ಮಳೆ
ಕಾಶಿಪಟ್ಣ ಪರಿಸರದಲ್ಲಿ ಸಂಜೆ ವೇಳೆ ಆಲಿಕಲ್ಲು ಮಳೆಯಾಗಿದೆ.
Related Articles
ಮೂಡುಬಿದಿರೆ ಬುಧವಾರ ಅಪರಾಹ್ನ 3 ಗಂಟೆಯ ಸುಮಾರಿಗೆ ಭಾರೀ ಮೋಡ ದಟ್ಟೆ$çಸಿ ಗುಡುಗು ಸಹಿತ ಸುಮಾರು ಅರ್ಧ ತಾಸು ಸಾಧಾರಣ ಮಳೆ ಬಿತ್ತು.
Advertisement
ಶಿರ್ತಾಡಿ, ನಾರಾವಿ ಸಹಿತ ಹಲವೆಡೆ ಭಾರೀ ಮಳೆ ಸುರಿಯಿತು. ಬಜಪೆ, ಎಡಪದವು ಪರಿಸರದಲ್ಲಿ ಹನಿಮಳೆಯಾಗಿದೆ.
ಕಾರ್ಕಳ ವಿವಿಧೆಡೆ ಮಳೆಕಾರ್ಕಳ ತಾಲೂಕಿನ ವಿವಿಧೆಡೆ ಸಂಜೆ ವೇಳೆ ಸಾಧಾರಣ ಮಳೆಯಾಗಿದೆ. ಮುಡಾರು, ಬಜಗೋಳಿ, ಮಾಳ, ಹೊಸ್ಮಾರು, ಬೆಳ್ಮಣ್, ಅಜೆಕಾರು ಪರಿಸರದಲ್ಲಿ ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಉಳಿದಂತೆ ಮಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಉರಿ ಸೆಕೆ ಮತ್ತು ಬಿಸಿಲು ಹೆಚ್ಚಾಗಿತ್ತು. 2-3 ದಿನ ಗಾಳಿ, ಸಿಡಿಲು ಮಳೆ
ಮಂಗಳೂರು: ಕರಾವಳಿ ಮತ್ತು ದಕ್ಷಿಣ ಒಳನಾಡಿನ ವಿವಿಧೆಡೆ 2-3 ದಿನ ಗಾಳಿ, ಸಿಡಿಲು ಸಹಿತ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರದಂದು ಪಣಂಬೂರಿ ನಲ್ಲಿ 36.4 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 3 ಡಿ.ಸೆ. ಉಷ್ಣಾಂಶ ಹೆಚ್ಚು ಇತ್ತು. 27.2 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಹೆಚ್ಚು ಇತ್ತು.
ಕಾಶಿಪಟ್ಣದ ಮಸೀದಿ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬೀಳುತ್ತಿದ್ದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನು ಚರಂಡಿ ಕಡೆ ತಿರುಗಿಸಿದ್ದು, ಭಾರೀ ಅನಾಹುತವೊಂದು ಕೂದಳೆಲೆಯ ಅಂತರದಲ್ಲಿ ತಪ್ಪಿದಂತಾಗಿದೆ.