Advertisement
ಮಂಗಳೂರು ನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹನಿ ಮಳೆಯಾಗಿತ್ತೇ ವಿನಾ ಬಿರುಸಿನ ಮಳೆಯಾಗಿರಲಿಲ್ಲ. ನಗರದಲ್ಲಿ ಗುರುವಾರ ಬೆಳಗ್ಗಿನಿಂದಲೇ ಮೋಡದಿಂದ ಕೂಡಿದ ವಾತಾವರಣ ಮತ್ತು ಉರಿ ಸೆಕೆ ಇತ್ತು. ರಾತ್ರಿ ಸುಮಾರು 8 ಗಂಟೆಗೆ ಸಿಡಿಲು, ಮಿಂಚು ಸಹಿತ ಉತ್ತಮ ಮಳೆ ಸುರಿದಿದೆ.
Related Articles
ದ.ಕ. ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾದ ಪರಿಣಾಮ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಕೆಲ ತಾಸು ವಿದ್ಯುತ್ ಕೈಕೊಟ್ಟಿತ್ತು.
Advertisement
ಇಂದು ಎಲ್ಲೋ ಅಲರ್ಟ್ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮೇ 12ರಂದು ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಿರುವ ಸಾಧ್ಯತೆ ಇದೆ. ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ
ಕರಾವಳಿ ಭಾಗದಲ್ಲಿ ಉರಿ ಸೆಕೆ ಮತ್ತು ಬಿಸಿಲು ಮುಂದುವರಿದಿದ್ದು, ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದೆ. ಮಂಗಳೂರು ನಗರದಲ್ಲಿ ಗುರುವಾರ 35.2 ಡಿ.ಸೆ. ಗರಿಷ್ಠ ಮತ್ತು 26.1 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ವಾಡಿಕೆಗಿಂತ 1 ಡಿ.ಸೆ. ಹೆಚ್ಚು ಇತ್ತು. ಬಂಟ್ವಾಳದಲ್ಲಿ ಸಾಧಾರಣ ಮಳೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಹಲವೆಡೆ ಗುರುವಾರ ಸಂಜೆ ಸಾಧಾರಣ ಮಳೆಯಾಗಿದ್ದು, ಕೆಲವೆಡೆ ಸಣ್ಣಮಟ್ಟಿಗೆ ಗುಡುಗು ಕೂಡ ಕಾಣಿಸಿಕೊಂಡಿತ್ತು. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡುಬಂದು ಸಂಜೆಯಾಗುತ್ತಲೇ ಹನಿ ಮಳೆ ಬೀಳಲಾರಂಭಿಸಿದೆ.