Advertisement
ಪಟ್ಟಣದ ಕೃಷಿ ಇಲಾಖೆ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ13 ಹಾದು ಹೋಗಿದ್ದು ಪ್ರತಿಭಾರಿ ಸುರಿಯುವ ಮಳೆಗೆ ನೀರು ಸರಿಯಾಗಿ ಹರಿದು ಹೋಗದೇ ಜಖಂ ಗೊಳ್ಳುವ ಮೂಲಕ ರಸ್ತೆಯಲ್ಲಿ ಸುಮಾರು 4ಅಡ್ಡಿಗೂ ಹೆಚ್ಚು ನೀರು ಶೇಖರಣೆಯಾಗುತ್ತಿದೆ ಇದರಿಂದ ವಾಹನ ಸಂಚಾರ ಕ್ಕೆ ಕಿರಿಕಿರಿ ಆಗುತ್ತಿದ್ದು ನಿಲ್ಲಿಸ್ಸುವ ವಾಹನಗಳು ಜಖಂ ಆಗುವಂತಹ ಘಟನೆ ನಡೆಯುತ್ತಿವೆ.
ಮುಖ್ಯ ರಸ್ತೆಯ ಪಕ್ಕದಲ್ಲಿ ಚರಂಡಿಗಳನ್ನು ಅವೈಜ್ಞಾನಿಕ ವಾಗಿ ನಿರ್ಮಿಸಿರಿವುದರಿಂದ ಮಳೆಯ ನೀರು ಹೋಗದೇ ನಿಲ್ಲುತ್ತಿವೇ ಹಾಗೂ ಸಾಮಾನ್ಯ ದಿನಗಳಲ್ಲಿ ಕೊಳಚೆ ನೀರು ಶೇಖರಣೆ ಆಗಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೇ ಇಷ್ಟೆಲ್ಲ ಸಮಸ್ಯೆಗಳಿಗೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಜನತೆ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ..