Advertisement

Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ

09:28 PM May 24, 2024 | Team Udayavani |

ಬೆಂಗಳೂರು: ರಾಜ್ಯದ ಹಲವೆಡೆ ಶುಕ್ರವಾರವೂ ಧಾರಾಕಾರ ಮಳೆಯಾಗಿದ್ದು, ದ್ರಾಕ್ಷಿ, ಮಾವು ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಶುಕ್ರವಾರ ಬಿದ್ದ ಬಿರುಗಾಳಿ ಸಹಿತ ವರ್ಷಾಧಾರೆಗೆ ತಾಲೂಕಿನ ಅಜ್ಜವಾರದಲ್ಲಿ ಸುಮಾರು 100 ವರ್ಷಕ್ಕೂ ಮೇಲ್ಪಟ್ಟ ಅರಳಿ ಮರ ಧರೆಗುರುಳಿದೆ.

ಹಲವೆಡೆ ಬಿರುಗಾಳಿ ಸಹಿತ ಮಳೆಗೆ ರಸ್ತೆಯ ಹಲವು ಕಡೆಗಳಲ್ಲಿ ಹಾಕಲಾಗಿದ್ದ ಬೃಹತ್‌ ಗಾತ್ರದ ಜಾಹೀರಾತು ಫ‌ಲಕಗಳು ನೆಲಕ್ಕೆ ಬಿದ್ದಿವೆ. ಜಿಲ್ಲೆಯ ಹಲವು ಕಡೆ ಬಿರುಗಾಳಿ ಸಹಿತ ಮಳೆಗೆ ದ್ರಾಕ್ಷಿ, ಮಾವು ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಸುರಿದಿದ್ದ ಭಾರೀ ಮಳೆಯಿಂದ ಶಿಥಿಲಗೊಂಡಿದ್ದ ಮಾಳಿಗೆ ಮನೆ ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡು, ಮಕ್ಕಳು ಪವಾಡ ಸದೃಶ್ಯ ರೂಪದಲ್ಲಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಡಿಲಾಘಾತಕ್ಕೆ ಕಾಲೇಜು ವಿದ್ಯಾರ್ಥಿ ಸಾವು
ಶಿರ್ವ: ಮನೆಯ ಬಾವಿಕಟ್ಟೆ ಬಳಿ ಸ್ನಾನಕ್ಕೆಂದು ತೆರಳಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಸಿಡಿಲು ಬಡಿದು ಮೃತಪಟ್ಟ ಘಟನೆ ಶಿರ್ವ ಮಾಣಿಬೆಟ್ಟು ಬಳಿ ಗುರುವಾರ ಸಂಜೆ ನಡೆದಿದೆ. ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿ ರಕ್ಷಿತ್‌ ಪೂಜಾರಿ (20) ಮೃತಪಟ್ಟವರು. ಗುರುವಾರ ಸಂಜೆ ಕಾಲೇಜು ಬಿಟ್ಟು ಮನೆಗೆ ಬಂದ ಬಳಿಕ ರಕ್ಷಿತ್‌ ಬಾವಿಕಟ್ಟೆಯ ಬಳಿಯಿರುವ ಬಚ್ಚಲು ಮನೆಗೆ ಸ್ನಾನಕ್ಕೆ ತೆರಳಿದ್ದರು. ಬಾವಿಕಟ್ಟೆ ಬಳಿಯ ತೆಂಗಿನ ಮರ ಮತ್ತು ಅಡಿಕೆ ಮರದ ಕೆಳಗೆ ಕೊಡೆ ಹಿಡಿದು ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ಪರಿಶ್ರಮಿಯಾಗಿದ್ದ ಅವರು ಮನೆಯಲ್ಲಿ ಹಾಲು ಕರೆದು ಡೈರಿಗೆ ಕೊಟ್ಟು ಬಂದ ಬಳಿಕ ಮನೆಯಲ್ಲಿ ತಾಯಿಗೆ ಮಲ್ಲಿಗೆ ಕಟ್ಟಲು ನೆರವಾಗಿ ಬಳಿಕ ಕಾಲೇಜಿಗೆ ತೆರಳುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next