Advertisement
ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್ ಮೇಲೆ ನಿಂತು ಮತ್ತು ರೈಲು ಸಮೀಪಿಸುವಾಗ ಹಳಿಯ ಬಳಿ ನಿಂತು ಸೆಲ್ಫಿà ಕ್ಲಿಕ್ಕಿಸಿಕೊಳ್ಳುವ ಪ್ರಯಾಣಿಕರಿಗೆ ತಲಾ 2,000 ರೂ. ದಂಡ ವಿಧಿಸಲು ದಕ್ಷಿಣ ವಿಭಾಗೀಯ ರೈಲ್ವೇ ನಿರ್ಧರಿಸಿದೆ. ಸೆಲ್ಫಿ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚು ತ್ತಿರುವ ಹಿನ್ನೆಲೆ ಯಲ್ಲಿ ಯುವ ಪ್ರಯಾಣಿಕರಿಗೆ ಕಠಿನ ಎಚ್ಚರಿಕೆ ನೀಡುವ ಸಲುವಾಗಿ ಇಂಥ ನಿರ್ಧಾರ ತೆಗೆದು ಕೊಳ್ಳಲಾಗಿದೆ.
Related Articles
ಗೋವಾದ ಬೀಚ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ನೀರುಪಾಲಾಗುವಂಥ ಘಟನೆಗಳು ಹೆಚ್ಚುತ್ತಿರುವ ಕಾರಣ ಇಲ್ಲಿ 24 “ನೋ ಸೆಲ್ಫಿ ವಲಯ’ಗಳನ್ನು ಗುರುತಿಸಲಾಗಿದೆ. ಸರಕಾರ ನೇಮಿಸಿರುವ ಜೀವರಕ್ಷಕ ಸಂಸ್ಥೆಯು ಈ ವಲಯಗಳನ್ನು ಗುರುತಿಸಿದ್ದು, ಈ ಪ್ರದೇಶಗಳಲ್ಲಿ ಸೆಲ್ಫಿಗೆ ನಿಷೇಧ ಹೇರಲಾಗುತ್ತದೆ ಎಂದು ದೃಷ್ಟಿ ಮೆರೈನ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವಿಶಂಕರ್ ತಿಳಿಸಿದ್ದಾರೆ. ಬಾಗಾ, ಡೋನಾ ಪೌಲಾ ಜೆಟ್ಟಿ, ಸಿಂಕ್ವೆರಿಮ್ ಫೋರ್ಟ್, ಅಂಜುನಾ, ವಗಾತರ್, ಮೋರ್ಜಿಮ್, ಅಶ್ವೆಮ್, ಅರಂಬೋಳ್, ಕೆರಿಮ್ ಸಹಿತ 24 ಪ್ರದೇಶಗಳನ್ನು ಸೆಲ್ಫಿ ನಿಷೇಧ ವಲಯ ಎಂದು ಗುರುತಿಸಿದ್ದೇವೆ ಎಂದೂ ಹೇಳಿದ್ದಾರೆ. ಜತೆಗೆ ಈಗಾಗಲೇ ಎಲ್ಲ ಬೀಚ್‌ಗಳಲ್ಲಿ “ನೋ-ಸ್ವಿಮ್ ವಲಯ’ (ಈಜು ನಿಷೇಧಿತ ಪ್ರದೇಶ)ಗಳೆಂದು ಗುರುತಿಸಿ, ಅಲ್ಲಿ ಈಜಾಡದಂತೆ ಎಚ್ಚರಿಕೆ ನೀಡಲು ಕೆಂಪು ಬಾವುಟಗಳನ್ನು ಅಳವಡಿಸಲಾಗಿದೆ ಎಂದೂ ತಿಳಿಸಿದ್ದಾರೆ.
Advertisement