Advertisement

ಮಳೆಗೆ ಮುಳುಗಿದ ಹೆಬ್ಟಾಳೆ ಸೇತುವೆ: ಸಂಚಾರ ಸ್ಥಗಿತ

03:22 PM Jun 12, 2018 | Team Udayavani |

ಮೂಡಿಗೆರೆ: ತಾಲೂಕಿನ ಕಳಸ ಹೋಬಳಿಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು,
ಸೋಮವಾರ ಭದ್ರಾ ನದಿಯು ಗರಿಷ್ಠ ಪ್ರಮಾಣದಲ್ಲಿ ತುಂಬಿ ಹರಿಯಲಾರಂಭಿಸಿದೆ.

Advertisement

ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು ಪ್ರದೇಶಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ನದಿ, ಹಳ್ಳ, ತೊರೆಗಳು
ಮೈದುಂಬಿ ಹರಿಯುತ್ತಿವೆ. ಭದ್ರಾ ನದಿಯು ತುಂಬಿ ಹರಿಯುತ್ತಿರುವ ಪರಿಣಾಮ ಕಳಸ ಸಮೀಪದ ಹೆಬ್ಟಾಳೆ
ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತು. ಇದರಿಂದ ಹೊರನಾಡು, ಬಲಿಗೆ, ಚಿಕ್ಕನಕುಡಿಗೆ, ಮಾವಿನಹೊಲ, ಮಣ್ಣಿನಪಾಲ್‌ ಕಡೆ ಹೋಗುವ ಗ್ರಾಮಸ್ಥರು ತೊಂದರೆ ಅನುಭವಿಸಿದರು.

ಹೊರನಾಡಿಗೆ ಬಂದ ಪ್ರವಾಸಿಗರು ಒಂದೆರಡು ಗಂಟೆ ಸೇತುವೆ ಬುಡದಲ್ಲಿ ಕಾಯುವಂತಾಯಿತು. ಕೆಲ ಪ್ರಯಾಣಿಕರು ಹೊರನಾಡಿಗೆ ಹೋಗುವ ಬದಲಿ ಮಾರ್ಗದಲ್ಲಿ ತೆರಳಿದರು.

ಸಂಸೆಯ ಸೋಮಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಸಂಸೆ ಮುಖ್ಯ ರಸ್ತೆಯಲ್ಲಿ ಸಮರ್ಪಕ ಚರಂಡಿಯ ವ್ಯವಸ್ಥೆ ಇಲ್ಲದೆ ಮೂರು ಮನೆಗಳಿಗೆ ನೀರು ನುಗ್ಗಿದೆ. ಮುಖ್ಯ ರಸ್ತೆಯಲ್ಲಿ ಒಂದೆರಡು ಅಡಿಗಳಷ್ಟು ನೀರು ತುಂಬಿ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಹುಚ್ಚು ಸಾಹಸ ಮೆರೆದ ಪ್ರಯಾಣಿಕರು: ಕಳಸ-ಹೊರನಾಡು ಸಂಪರ್ಕ ಹೆಬ್ಟಾಳೆ ಸೇತುವೆ ಮುಳುಗಡೆಯಾಗುತ್ತಿದ್ದಂತೆ ಪ್ರವಾಸಿಗರು, ಖಾಸಗಿ ಬಸ್‌, ಸರ್ಕಾರಿ ಬಸ್‌ ಇತರೆ ವಾಹನಗಳು ಸೇತುವೆ ದಾಟಿಸಿ
ಹುಚ್ಚು ಸಾಹಸ ಮೆರೆದರು. ಸೇತುವೆಯಿಂದ ಸುಮಾರು ಒಂದೂವರೆ ಅಡಿಗಳಷ್ಟು ಎತ್ತರದಲ್ಲಿ ರಭಸವಾಗಿ
ನೀರು ಹರಿಯುತ್ತಿದ್ದರೂ ಕೂಡ ಪ್ರಯಾಣಿಕರೊಂದಿಗೆ ಸೇತುವೆಯ ಮೇಲೆ ವಾಹನ ದಾಟಿಸಿದರು. ಸ್ಥಳೀಯರು
ಇಂತಹ ಅಪಾಯಕಾರಿ ಸೇತುವೆಯ ಮೇಲೆ ವಾಹನ ದಾಟಿಸಬೇಡಿ ಎಂದು ಹೇಳಿದರೂ ಕೂಡ ಪ್ರವಾಸಿಗರು
ಸ್ಥಳಿಯರ ಮಾತಿಗೆ ಬೆಲೆ ನೀಡಲಿಲ್ಲ .

Advertisement
Advertisement

Udayavani is now on Telegram. Click here to join our channel and stay updated with the latest news.

Next