Advertisement

Heatwave: ಉತ್ತರ ಭಾರತದಲ್ಲಿ ನಿಲ್ಲದ ಬಿಸಿಲಿನ ಪ್ರಕೋಪ- ಒಟ್ಟು 39 ಮಂದಿ ಸಾವು

10:41 AM May 31, 2024 | Team Udayavani |

ನವದೆಹಲಿ: ದೇಶದ ದಕ್ಷಿಣ, ಪೂರ್ವ, ಈಶಾನ್ಯ ಭಾಗಗಳಲ್ಲಿ ಸುರಿಯುತ್ತಿದ್ದರೆ, ಉತ್ತರದಲ್ಲಿ ಬಿಸಿಲ ಝಳ ಮುಂದುವರಿದಿದ್ದು, ತಾಪದ ತೀವ್ರತೆಗೆ ಒತ್ತು 36 ಮಂದಿ ಅಸುನೀಗಿದ್ದಾರೆ. ಬಿಹಾರದ ಔರಂಗಾಬಾದ್‌ ಜಿಲ್ಲೆಯಲ್ಲಿ 2 ಗಂಟೆಗಳ ಅವಧಿಯಲ್ಲಿ 19 ಮಂದಿ ಬಿಸಿಲ ಹೊಡೆತದಿಂದ ಅಸುನೀಗಿದ್ದಾರೆ.

Advertisement

ಇದನ್ನೂ ಓದಿ:Birthday: ರಸ್ತೆಯನ್ನೇ ಬ್ಲಾಕ್ ಮಾಡಿ ಹುಟ್ಟುಹಬ್ಬ ಆಚರಿಸಿದ ಪುಂಡರು… ವಿಡಿಯೋ ವೈರಲ್

ಬಿಹಾರದಲ್ಲಿ ಗುರುವಾರ ಗರಿಷ್ಠ ತಾಪಮಾನ 48.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿನ ಗುರುವಾರವೇ ಕನಿಷ್ಠ 35 ಮಂದಿ ಬಿಸಿಲ ಝಳದಿಂದ ಬಸವಳಿದವರು ದಾಖಲಾಗಿದ್ದಾರೆ.

ಒಡಿಶಾದಲ್ಲಿ 10 ಸಾವು: ಇನ್ನೊಂದೆಡೆ ಒಡಿಶಾದ ರೂರ್ಕೆಲಾ ಜಿಲ್ಲೆಯಲ್ಲಿ ಬಿಸಿಲ ಝಳದಿಂದ 10 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ 8 ಮಂದಿ ದಾಖಲಾಗುವ ವೇಳೆ ಅಸು ನೀಗಿದ್ದರೆಂದು ವೈದ್ಯರು ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ 5 ಮಂದಿ:
ರಾಜಸ್ಥಾನದಲ್ಲೂ ಬಿಸಿಲ ಪ್ರಕೋಪಕ್ಕೆ 5 ಮಂದಿ, ಜಾರ್ಖಂಡ್‌ನ‌ಲ್ಲಿ ನಾಲ್ವರು, ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು
ಕೊನೆಯುಸಿರೆಳೆದಿದ್ದಾರೆ. ಈ ನಡುವೆ ರಾಜಸ್ಥಾನದ ಗಂಗಾನಗರದಲ್ಲಿ 48.2 ಡಿಗ್ರಿ ಸೆಲ್ಸಿಯಸ್‌ ತಾಪ ದಾಖಲಾಗಿತ್ತು.
ಮಧ್ಯಪ್ರದೇಶದ ಸಿಧಿಯಲ್ಲಿ 48.2, ವಾರಾಣಸಿಯಲ್ಲಿ 47.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next