Advertisement

MLA Abhay Patil; ‘ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಮೇವು ಹಗರಣ’

09:35 PM Jun 19, 2024 | Team Udayavani |

ಬೆಳಗಾವಿ: ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ದೊಡ್ಡ ಪ್ರಮಾಣದ ಮೇವು ಹಗರಣ ನಡೆದಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ರೈತರಿಗೆ ಮೇವು ವಿತರಣೆಗೆ ನಿರ್ಧರಿಸಿತ್ತು. ಆದರೆ ದಾಖಲೆಯಲ್ಲಷ್ಟೇ ಮೇವು ವಿತರಿಸಲಾಗಿದೆ. ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ಎಸಗಲಾಗಿದೆ.

ಮೇವಿನಲ್ಲಿ ಹಣ ತಿನ್ನುವ ಅಧಿ ಕಾರಿಗಳು ಮತ್ತು ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಇನ್ನು ಮುಂದೆ ಎಲ್ಲ ಹಗರಣಗಳು ಹೊರಗೆ ಬರಲಿವೆ. ಸಿಎಂ ಹಾಗೂ ಡಿಸಿಎಂಗೆ ಬರ ಬಂದಿದೆ. ಈ ಸರ್ಕಾರದಲ್ಲಿ ಆಗಿರುವಷ್ಟು ಹಗರಣ ಎಂದಿಗೂ ಆಗಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next