ನವದೆಹಲಿ: ದೇಶದ ದಕ್ಷಿಣ, ಪೂರ್ವ, ಈಶಾನ್ಯ ಭಾಗಗಳಲ್ಲಿ ಸುರಿಯುತ್ತಿದ್ದರೆ, ಉತ್ತರದಲ್ಲಿ ಬಿಸಿಲ ಝಳ ಮುಂದುವರಿದಿದ್ದು, ತಾಪದ ತೀವ್ರತೆಗೆ ಒತ್ತು 36 ಮಂದಿ ಅಸುನೀಗಿದ್ದಾರೆ. ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ 2 ಗಂಟೆಗಳ ಅವಧಿಯಲ್ಲಿ 19 ಮಂದಿ ಬಿಸಿಲ ಹೊಡೆತದಿಂದ ಅಸುನೀಗಿದ್ದಾರೆ.
ಇದನ್ನೂ ಓದಿ:Birthday: ರಸ್ತೆಯನ್ನೇ ಬ್ಲಾಕ್ ಮಾಡಿ ಹುಟ್ಟುಹಬ್ಬ ಆಚರಿಸಿದ ಪುಂಡರು… ವಿಡಿಯೋ ವೈರಲ್
ಬಿಹಾರದಲ್ಲಿ ಗುರುವಾರ ಗರಿಷ್ಠ ತಾಪಮಾನ 48.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿನ ಗುರುವಾರವೇ ಕನಿಷ್ಠ 35 ಮಂದಿ ಬಿಸಿಲ ಝಳದಿಂದ ಬಸವಳಿದವರು ದಾಖಲಾಗಿದ್ದಾರೆ.
ಒಡಿಶಾದಲ್ಲಿ 10 ಸಾವು: ಇನ್ನೊಂದೆಡೆ ಒಡಿಶಾದ ರೂರ್ಕೆಲಾ ಜಿಲ್ಲೆಯಲ್ಲಿ ಬಿಸಿಲ ಝಳದಿಂದ 10 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ 8 ಮಂದಿ ದಾಖಲಾಗುವ ವೇಳೆ ಅಸು ನೀಗಿದ್ದರೆಂದು ವೈದ್ಯರು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ 5 ಮಂದಿ:
ರಾಜಸ್ಥಾನದಲ್ಲೂ ಬಿಸಿಲ ಪ್ರಕೋಪಕ್ಕೆ 5 ಮಂದಿ, ಜಾರ್ಖಂಡ್‌ನಲ್ಲಿ ನಾಲ್ವರು, ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು
ಕೊನೆಯುಸಿರೆಳೆದಿದ್ದಾರೆ. ಈ ನಡುವೆ ರಾಜಸ್ಥಾನದ ಗಂಗಾನಗರದಲ್ಲಿ 48.2 ಡಿಗ್ರಿ ಸೆಲ್ಸಿಯಸ್ ತಾಪ ದಾಖಲಾಗಿತ್ತು.
ಮಧ್ಯಪ್ರದೇಶದ ಸಿಧಿಯಲ್ಲಿ 48.2, ವಾರಾಣಸಿಯಲ್ಲಿ 47.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.