ಕುಂಬಳೆ /ಮಂಗಳೂರು/ಉಡುಪಿ: ವಾಹನದಲ್ಲಿ ಹಣ್ಣು ಹಂಪಲು ತುಂಬಿಸಿ ಬೀದಿ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಕೊಡ್ಯಮ್ಮೆ ಉಜಾರು ನಿವಾಸಿ ಮುಹಮ್ಮದ್ ರಫೀಖ್ (43) ಅವರಿಗೆ ಬಿಸಿಲಿನ ತಾಪದಿಂದ ಸುಟ್ಟ ಗಾಯವಾಗಿವೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರಾವಳಿಯಲ್ಲಿ ಬಿಸಿಲ ವಾತಾವರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಹಗಲು ವೇಳೆಯಲ್ಲಿ ಉರಿಬಿಸಿಲ ವಾತಾವರಣವಿತ್ತು. ಸಂಜೆ ವೇಳೆ ಗ್ರಾಮೀಣ ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಬೆಳ್ತಂಗಡಿಯ ಕೆಲವೆಡೆ ಹನಿ ಮಳೆ, ಕಾರ್ಕಳ ಪರಿಸರದಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ.
ಈಗಾಗಲೇ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಒಂದೆರಡು ಬಾರಿ ಮಳೆಯಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬೇಸಗೆ ಮಳೆ ಸುರಿಯುತ್ತಿಲ್ಲ ಎನ್ನುತ್ತಾರೆ ಹವಾಮಾನ ವಿಶ್ಲೇಷಕರು. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.