Advertisement
ನಗರದಲ್ಲಿ ಮಾಸ್ಕ್ ಸಹಿತ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿ ನಗರಸಭೆ ಅಧಿಕಾರಿಗಳು ಮುಖ್ಯ ಪೇಟೆಯಲ್ಲಿ ಬುಧವಾರ ದಾಳಿ ನಡೆಸಿದರು. ನಿಟ್ಟೂರು, ನಗರ ಬಸ್ ಸ್ಟಾಂಡ್ ಮುಂತಾದ ಕಡೆ ಬೆಳಗ್ಗೆ ವಲಸೆ ಕಾರ್ಮಿಕರು ಮಾಸ್ಕ್ ಧರಿಸದೆ ಕೆಲಸಕ್ಕೆ ಹೊರಟಿದ್ದರು. ಅವರನ್ನು ತಡೆದ ನಗರಸಭೆ ಅಧಿಕಾರಿಗಳು ಕಾರ್ಮಿಕರನ್ನು ವಾಪಸ್ ಮನೆಗಳಿಗೆ ಕಳುಹಿಸಿ, ಮಾಸ್ಕ್ ಧರಿಸಿಯೇ ಮನೆಯಿಂದ ಹೊರ ಬರುವಂತೆ ಸೂಚಿಸಿದರು. ನಗರದಲ್ಲಿ ಬುಧವಾರ ಮಾಸ್ಕ್ ಧರಿಸದ 4 ಮಂದಿಯಿಂದ 400 ರೂ. ದಂಡ ಸಂಗ್ರಹಿಸಲಾಗಿದೆ.
ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ಜೂ.30ರಂದು 5 ಕೇಸು, 500 ರೂ. ದಂಡ, ಜು. 1ರಂದು 8 ಕೇಸ್, 800 ರೂ. ದಂಡ ವಿಧಿಸಲಾಗಿದೆ. ಕಾರ್ಕಳ
ಕಾರ್ಕಳ ನಗರ ಪೊಲೀಸ್ ಠಾಣೆ ಪೊಲೀಸರು ಬುಧವಾರ ಕೂಡ ಜಾಗೃತಿ ನಡೆಸಿದರು. ಚೆಕ್‌ಪೋಸ್ಟ್‌ಗಳನ್ನು ತೆರೆದು ಅರಿವು ಮೂಡಿಸಿದರು. ಆನೆಕೆರೆ, ಮಾರುಕಟ್ಟೆ, ಅನಂತಶಯನ ಮೊದಲಾದ ಕಡೆಗಳಲ್ಲಿ ಪೊಲೀಸರು ಮಾಸ್ಕ್ ಧರಿಸುವಂತೆ ತಿಳಿವಳಿಕೆ ನೀಡಿದರು. ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಇಬ್ಬರಿಗೆ ಪೊಲೀಸರು ದಂಡ ವಿಧಿಸಿದರು.