Advertisement
ಫ್ರೀಡಂ ಪಾರ್ಕ್, ಟೌನ್ ಹಾಲ್, ಗಾಂಧಿ ಪ್ರತಿಮೆ, ಯುದ್ಧ ಸ್ಮಾರಕ, ಸೇನಾ ನೆಲೆಗಳು, ಸೇನಾ ಕಚೇರಿಗಳು, ವಿಶ್ವವಿದ್ಯಾಲಯ, ಶಾಲಾ ಕಾಲೇಜು, ರಾಜಕೀಯ ಪಕ್ಷಗಳ ಕಚೇರಿ, ಹೋಟೆಲ್, ಮಾಲ್ ಸಹಿತವಾಗಿ ನಗರದ ವೃತ್ತಗಳಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಯವರು ಹುತಾತ್ಮ ಯೋಧರನ್ನು ನೆನೆದು ನಮನ ಸಲ್ಲಿಸಿದರು.
ಹುತಾತ್ಮರಾದ ಯೋಧರ ಆತ್ಮಕ ಸದ್ಗತಿ ದೊರೆಯಬೇಕಾದರೆ, ಕೇಂದ್ರ ಸರ್ಕಾರ ಪಾಪಿಗಳ ವಿರುದ್ಧ ಸಮರ ಸಾರಲೇ ಬೇಕು ಎಂದು ಸಾರ್ವಜನಿಕರು ಸಾಮೂಹಿಕವಾಗಿ ಒತ್ತಾಯ ಮಾಡಿದರು. ಮಲ್ಲೇಶ್ವಂ, ಕೆ.ಆರ್.ವೃತ್ತ, ಚಾಮರಾಜಪೇಟೆ, ಕೆ.ಆರ್.ಪುರಂ, ಎಂ.ಜಿ.ರಸ್ತೆ, ಗಿರಿನಗರ, ಯಶವಂತಪುರ, ಜಾಲಹಳ್ಳಿ, ಇಂದಿರಾನಗರ ಮೊದಲಾದ ಕಡೆಗಳಲ್ಲಿ ಹುತಾತ್ಮ ಯೋಧರ ಭಾವಚಿತ್ರ ಇರುವ ಬ್ಯಾನರ್‌ಗಳನ್ನು ಹಿಡಿದು, ಭಯೋತ್ಪಾದಕರ ವಿರುದ್ಧ ಘೋಷಣೆ ಕೂಗಿ, ಪ್ರತಿಕಾರ ತೀರಿಸಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
Related Articles
Advertisement
ಬಿಜೆಪಿ ಕಚೇರಿ: ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಿಜೆಪಿ ಹಿರಿಯ ನಾಯಕರಾದ ರಾಮಚಂದ್ರ ಗೌಡ, ಶಾಸಕ ಸಿ.ಟಿ. ರವಿ, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ. ಮೋಹನ್, ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ತೇಜಸ್ವಿನಿ ಗೌಡ, ಮಾಜಿ ಶಾಸಕ ಮುನಿರಾಜು, ನಗರ ಅಧ್ಯಕ್ಷ ಪಿ.ಎನ್.ಸದಾಶಿವ ಮೊದಲಾದವರು ಹುತಾತ್ಮ ಯೋಧರ ಸೇವೆ ಸ್ಮರಿಸಿದರು
ಬಿಜೆಪಿ ಶಿವಾಜಿನಗರ ಮಂಡಲದ ವತಿಯಿಂದ ಜವಾಹರಲಾಲ್ ನೆಹರು ತಾರಾಲಯದ ಎದುರು ಇರುವ ಯೋಧರ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸದೆ ಶೋಭಾ ಕರಂದ್ಲಾಜೆ ಈ ವೇಳೆ ಹಾಜರಿದ್ದರು. ಸಿಟಿಜನ್ ಫಾರ್ ಡಮಾಕ್ರಸಿ ಸಂಘಟನೆಯಿಂದ ವಿಜಯನಗರ, ಮೈಸೂರು ಬ್ಯಾಂಕ್ ವೃತ್ತ, ಜನಯನಗರ, ಹೆಬ್ಟಾಳ ಹಾಗೂ ಗಾಂಧಿ ಬಜಾರ್‌ನಲ್ಲಿ ಮೊಂಬತ್ತಿ ಹಿಡಿದು ಯೋಧರಿಗೆ ಅಂತಿಮ ನಮನ ಸಲ್ಲಿಸಲಾಯಿತು.
ವಿಶ್ವಹಿಂದು ಪರಿಷತ್, ಭಜರಂಗದಳ, ಹಿಂದುಜಾಗರಣ ವೇದಿಕೆ, ಎಸ್.ಪಿ. ರಸ್ತೆ ವ್ಯಾಪಾರಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಟೌನ್ ಹಾಲ್ ಮುಂಭಾಗದಲ್ಲಿ ಮೊಂಬತ್ತಿ ಹೊತ್ತಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅನೇಕ ಸಂಘಟನೆಗಳು ಹಾಗೂ ಸಾರ್ವಜನಿಕರು ಸ್ವಾತಂತ್ರ್ಯ ಉದ್ಯಾನವದ ಎದುರು ಕೂಡ ಮೊಂಬತ್ತಿ ಹೊತ್ತಿಸಿ ನಮನ ಸಲ್ಲಿಸಿದರು.