Advertisement

ಹೃದಯಾಘಾತ: ಪುತ್ತೂರು ಮೂಲದ ಚಾಲಕ ಸಾವು

12:28 PM May 23, 2018 | Karthik A |

ಶನಿವಾರಸಂತೆ: ಕಾರು ಚಲಾಯಿಸುತ್ತದ್ದ ವೇಳೆಯಲ್ಲಿ ಕಾರಿನ ಸ್ಟೇರಿಂಗ್‌ ಲಾಕ್‌ಗೊಂಡ ಪರಿಣಾಮ ಕಾರು ಪ್ರಪಾತಕ್ಕೆ ಉರಳಬಹುದೆಂಬ ಗಾಬರಿಯಿಂದ ಕಾರು ಚಾಲಕ ತೀವ್ರ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ ಘಟನೆ ಮಂಗಳವಾರ ಬೆಳಗ್ಗೆ ಸೋಮವಾರಪೇಟೆ ಸಮೀಪದ  ಬಿಟಿಸಿಜಿ ವಿದ್ಯಾಸಂಸ್ಥೆ ಬಳಿಯ ತಿರುವಿನಲ್ಲಿ ನಡೆದಿದೆ. 

Advertisement

ಶನಿವಾರಸಂತೆ ಸಮೀಪದ ಗೋಪಾಲಪುರದಲ್ಲಿ ಮೆಕ್ಯಾನಿಕ್‌ ಆಗಿರುವ ತೇಜ್‌ (35) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ. ಪುತ್ತೂರು ಮೂಲದವರಾದ ತೇಜ್‌ ಹಲವು ವರ್ಷಗಳಿಂದ ಗುಡುಗಳಲೆ ಯಲ್ಲಿರುವ ವರ್ಕ್‌ಶಾರ್ಪ್‌ಗಳಲ್ಲಿ ಮೆಕ್ಯಾನಿಕ್‌ ಆಗಿದ್ದರು. 2 ವರ್ಷಗಳಿಂದ ಗುಡುಗಳಲೆ ಜಾತ್ರಾ ಮೈದಾನದ ಸಮೀಪ ಗೋಪಾಲ ಪುರದಲ್ಲಿ ಸ್ವಂತ ವರ್ಕ್‌ಶಾಪ್‌ ಅನ್ನು ನಡೆಸುತ್ತಿದ್ದರು. ಕಳೆದ ಒಂದೂವರೆ ವರ್ಷಗಳ ಹಿಂದೆಯಷ್ಟೆ ವಿವಾಹ ಮಾಡಿಕೊಂಡಿದ್ದ ತೇಜ್‌ ಪತ್ನಿಯನ್ನು ಪುತ್ತೂರಿನಲ್ಲಿರುವ ತನ್ನ ಮನೆಯಲ್ಲಿ ಬಿಟ್ಟು ಗೋಪಾಲಪುರ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ವಾಗಿದ್ದರು. 

ಮೂರು ದಿನಗಳ ಹಿಂದೆ ಪತ್ನಿ ಮತ್ತು ತನ್ನ 7 ತಿಂಗಳ ಮಗುವನ್ನು ನೋಡಲು ತೇಜ್‌ ಪುತ್ತೂರಿಗೆ ಹೋಗಿದ್ದರು. ಅದರಂತೆ ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪುತ್ತೂರಿನಿಂದ ತನ್ನ ಮಾರುತಿ ಆಮ್ನಿ° ವ್ಯಾನಿನಲ್ಲಿ ಗೋಪಾಲಪುರಕ್ಕೆ ವಾಪಸಾಗುತ್ತಿದ್ದ ವೇಳೆಯಲ್ಲಿ ಸೋಮವಾರಪೇಟೆ ಸಮೀಪದ ಬಿಟಿಸಿಜಿ ವಿದ್ಯಾಸಂಸ್ಥೆ ಬಳಿಯ ತಿರುವಿನಲ್ಲಿ ಕಾರಿನ ಸ್ಟೇರಿಂಗ್‌ ಇದ್ದಕ್ಕಿದ್ದಂತೆ ಲಾಕ್‌ಗೊಂಡ ಪರಿಣಾಮ ಕಾರು ತಿರುವಿನ ಕೆಳಭಾಗದಲ್ಲಿರುವ ಪ್ರಪಾತದ ಅಂಚಿನಲ್ಲಿ ನಿಂತುಕೊಂಡಿದೆ, ಕಾರು ಪ್ರಪಾತಕ್ಕೆ ಉರುಳಬಹುದೆಂಬ ಗಾಬರಿುಂದ ತೇಜ್‌ ತೀವ್ರ ಹೃದಯಾಘಾತ್ಕೊಳಗಾಗಿ ಕಾರಿನೊಳಗೆ ಮೃತಪಟ್ಟಿದ್ದಾರೆ. 

ಆಮ್ನಿ ಪ್ರಪಾತ ಬಳಿಯಲ್ಲಿ ನಿಂತು ಕೊಂಡಿರುವುದನ್ನು ಗಮನಿಸಿದ ವಿವಿಧ ವಾಹನ ಸವಾರರು ಕಾರಿನೊಳಗಿದ್ದ ತೇಜ್‌ ಅವ ರನ್ನು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಆಗಲೆ ಹೃದಯಘಾತದಿಂದ ಮೃತಪಟ್ಟಿದ್ದ ತೇಜ್‌ ಅವರ ಸಂಬಂಧಿಕರಿಗೆ ಸುದ್ದಿಮುಟ್ಟಿಸಿದರು. ಸೋಮವಾರಪೇಟೆ ಸರಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಅನಂತರ ತೇಜ್‌ ಸಂಬಂಧಿಕರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next