Advertisement
ಆದರೆ, ಎಂಟು ವರ್ಷಗಳಲ್ಲಿ ಕೆನಡಾದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1,100. ಇದಕ್ಕೆ ಕಾರಣ ನಗರದಲ್ಲಿ ವಾಹನಗಳು ಉಗುಳುತ್ತಿರುವ ಹೊಗೆ. ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಿಂದ ಹೃದಯಾಘಾತಕ್ಕೆ ತುತ್ತಾಗುವುದು ಸರ್ವೆಸಾಮಾನ್ಯ. ಆದರೆ, ನಗರದ ಜನ ವಾಯುಮಾಲಿನ್ಯದಿಂದಲೂ ಹೃದಯಾಘಾತಕ್ಕೀಡಾಗುತ್ತಿದ್ದು, ಇದು ಗಣನೀಯವಾಗಿ ಏರಿಕೆಯಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
Related Articles
Advertisement
ಅದರಲ್ಲಿ ಕೇವಲ ಶೇ. 10ರಷ್ಟು ಅಧಿಕ ರಕ್ತದೊತ್ತಡ ಮತ್ತು ಶೇ. 10ರಷ್ಟು ಮಧುಮೇಹದಿಂದ ಬಳಲುತ್ತಿರುವವರಾಗಿದ್ದರು. ಉಳಿದ ಶೇ. 80ರಷ್ಟು ರೋಗಿಗಳು ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ. ಇದರಲ್ಲಿ ಶೇ. 48ರಷ್ಟು ಮಾತ್ರ ಧೂಮಪಾನ ಮಾಡುತ್ತಿದ್ದರು. ಉಳಿದವರು ಇದೆಲ್ಲದರಿಂದ ಹೊರತಾಗಿದ್ದರು. ಆದರೂ ಅವರೆಲ್ಲಾ ಹೃದಯಾಘಾತಕ್ಕೀಡಾಗಿದ್ದರು’.
ಇದಕ್ಕೆ ಕಾರಣಗಳನ್ನು ಹುಡುಕಿದಾಗ, ಅವರೆಲ್ಲಾ ಆಟೋ ಅಥವಾ ಟ್ಯಾಕ್ಸಿ ಚಾಲಕರಾಗಿದ್ದು, ದಿನದ ಬಹುತೇಕ ಅವಧಿ ಸಂಚಾರದಟ್ಟಣೆಯಲ್ಲೇ ಕಳೆಯುತ್ತಿದ್ದರು. ಇದು ಹೃದಯಾಘಾತಕ್ಕೆ ಕಾರಣವಾಗಿದೆ. ಈ ರೋಗಿಗಳೊಂದಿಗೆ ಮಾತಿಗಿಳಿದಾಗ, ಸಾಮಾನ್ಯವಾಗಿ ಟ್ರಾಫಿಕ್‌ನಲ್ಲಿ ಈ ಚಾಲಕರು ಫ್ರೆಶ್ ಗಾಳಿಗಾಗಿ ಕಾರಿನ ಎಸಿ ಅನ್ನು ಆಫ್ ಮಾಡಿರುತ್ತಾರೆ.
ಇದರಿಂದ ಗಂಟೆಗಟ್ಟಲೆ ವಾಹನಗಳು ಉಗುಳುವ ಹೊಗೆ ಅವರ ಶರೀರ ಪ್ರವೇಶಿಸುತ್ತದೆ. ಇದರ ಪರಿಣಾಮ ಹೃದಯಾಘಾತಕ್ಕೀಡಾಗುತ್ತಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದರು. ಇದು ಕೇವಲ ಜಯದೇವ ಆಸ್ಪತ್ರೆಗೆ ಸೀಮಿತವಾಗಿಲ್ಲ. ನಗರದ ಬಹುತೇಕ ಪ್ರತಿಷ್ಠಿತ ಹೃದ್ರೋಗ ಆಸ್ಪತ್ರೆಗಳಲ್ಲೂ ಇದೇ ಮಾದರಿಯ ಹೃದಯಾಘಾತ ಪ್ರಕರಣಗಳಿವೆ.
ಹೃದಯಾಘಾತ ಮಾತ್ರವಲ್ಲ ಮಧುಮೇಹ, ಆಟಿಸಂ, ಬುದ್ಧಿಮಾಂದ್ಯತೆ ಸೇರಿದಂತೆ ಮತ್ತಿತರ ಕಾಯಿಲೆಗಳ ಪ್ರಮಾಣವೂ ಏರಿಕೆಯಾಗಿದೆ. ಆದರೆ, ಇಂತಿಷ್ಟೇ ಎಂದು ಹೇಳುವುದು ಕಷ್ಟ. ಇನ್ನು ಅದೇ ರೀತಿ, ಶೇ. 25ರಷ್ಟು ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ. ನಿರಂತರ ಕೆಮ್ಮಿನಿಂದ ಬಳಲುತ್ತಿರುವವರ ಸಂಖ್ಯೆ ಕಳೆದ ಒಂಧೂಳುವರೆ ದಶಕದಲ್ಲಿ ದುಪ್ಪಟ್ಟಾಗಿದೆ. ಇದೆಲ್ಲದಕ್ಕೂ ಕಾರಣ ಪಿಎಂ 2.5 (ಉಸಿರಾಡಲ್ಪಡುವಾಗ ದೇಹ ಸೇರಲ್ಪಡುವ ಧೂಳುಳಿನ ಕಣಗಳು) ಎಂದು ಶ್ವಾಸಕೋಶ ತಜ್ಞ ಡಾ.ಎಚ್. ಪರಮೇಶ ತಿಳಿಸುತ್ತಾರೆ.
ಬೈಸಿಕಲ್ ಏರಬೇಡಿ…!: ನಗರದಲ್ಲಿ ಕಾಲ್ನಡಿಗೆ ಮತ್ತು ಬೈಸಿಕಲ್ ಸವಾರಿ ಅಪಾಯಕಾರಿ ಎನ್ನುತ್ತಾರೆ ವೈದ್ಯರು! ಪ್ರಮುಖ ರಸ್ತೆಗಳು ಮತ್ತು ಸಿಗ್ನಲ್‌ಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ತುಂಬಾ ಹೆಚ್ಚಿರುತ್ತದೆ. ಇದರಿಂದ ಬಚಾವಾಗಲು ನಗರದ ಪ್ರಮುಖ ರಸ್ತೆಗಳಲ್ಲಿ ಬೈಸಿಕಲ್‌ನಲ್ಲಿ ಓಡಾಟ ಮತ್ತು ಕಾಲ್ನಡಿಗೆಯಲ್ಲಿ ಸಂಚರಿಸದಿರುವುದು ಒಳ್ಳೆಯದು. ಹೀಗೆ ಹೇಳುವುದು ತುಂಬಾ ಕಷ್ಟ. ಆದರೆ, ಅನಿವಾರ್ಯ ಕೂಡ. ಸಂಚಾರದಟ್ಟಣೆ ತಗ್ಗಿಸುವುದು ತುರ್ತು ಅವಶ್ಯಕತೆ ಇದೆ ಎಂಧೂಳು ವರದಿಯಲ್ಲಿ ತಿಳಿಸಲಾಗಿದೆ.
ಪಿಎಂ2.5 ಯಾವುದರ ಪಾಲು ಎಷ್ಟು?-ವಾಹನಗಳು- ಶೇ. 26.5
-ಧೂಳುಳು- ಶೇ. 23
-ಕೈಗಾರಿಕೆ- ಶೇ. 2.1
-ವಸತಿ ಪ್ರದೇಶ- ಶೇ. 9.9
-ಕಸ ಸುಡುವುದರಿಂದ- ಶೇ. 16.1
-ಡೀಸೆಲ್ ಜನರೇಟರ್ ಸೆಟ್- ಶೇ. 4.0 ಪಿಎಂ 2.5- 2015ಕ್ಕೆ 2030ಕ್ಕೆ (ಟನ್‌ನಲ್ಲಿ)
-ವಾಹನಗಳು- 12,550 19,050
-ಧೂಳುಳು- 6,400 11,700
-ವಸತಿ- 2,050 2,400
-ಕೈಗಾರಿಕೆ- 2,650 4,750
-ಕಸ ಸುಡುವಿಕೆ- 3,500 5,50
-ಡೀಸೆಲ್ ಜನರೇಟರ್- 1,250 1,450 ಶೇ. 93ರಷ್ಟು ಮಕ್ಕಳು: ಜಗತ್ತಿನಲ್ಲಿರುವ ಶೇ. 93ರಷ್ಟು ಮಕ್ಕಳು ನಿತ್ಯ ಸಣ್ಣ ಗಾತ್ರದ ಧೂಳುಳಿನ ಕಣ (ಪಿಎಂ2.5)ಗಳನ್ನು ಸೇವಿಸುತ್ತಿದ್ದಾರೆ. ಇದು ಅವರ ಶ್ವಾಸಕೋಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಒಟ್ಟಾರೆ ಶೇ. 93ರಷ್ಟು ಮಕ್ಕಳಲ್ಲಿ 63 ಕೋಟಿ 5 ವರ್ಷದ ಒಳಗಿನ ಹಾಗೂ 1.8 ಬಿಲಿಯನ್ ಮಕ್ಕಳು 15 ವರ್ಷದ ಒಳಗಿನವರಾಗಿದ್ದಾರೆ. ಈಚೆಗೆ ಜಿನೆವಾದಲ್ಲಿ ನಡೆದ ವಾಯುಮಾಲಿನ್ಯ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ ಕುರಿತು ನಡೆದ ಮೊದಲ ಜಾಗತಿಕ ಸಮಾವೇಶದಲ್ಲಿ ಇದನ್ನು ಸ್ವತಃ ವಿಶ್ವಸಂಸ್ಥೆ ತಿಳಿಸಿದೆ. * ವಿಜಯಕುಮಾರ್ ಚಂದರಗಿ