ಮುಂಬಯಿ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನಗೈಯಲು ಅಣಿಯಾಗುತ್ತಿದ್ದಂತೆ ಹೃದಯಾಘಾತಕ್ಕೊಳಗಾಗಿ ತುಳು-ಕನ್ನಡಿಗ ಪ್ರತಿಭಾವಂತ ಕಲಾವಿದೆ ಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ದುರಂತ ಸಾವನ್ನಪ್ಪಿರುವ ಕಲಾವಿದೆಯನ್ನು ಚೇತನಾ ಜಿ. ಆಚಾರ್ಯ (40)ಎಂದು ಗುರುತಿಸಲಾಗಿದೆ. ಕರ್ನಾಟಕ ವಿಶ್ವಕರ್ಮ ಅಸೋಸಿ ಯೇಶನ್ ಇದರ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಆಯೋಜನೆಯಲ್ಲಿ ರವಿವಾರ ಸಂಜೆ “ಜಂಬೊರೆ-2017′ ಸಾಂಸ್ಕೃತಿಕ ಉತ್ಸವವು ಬೊರಿವಲಿ ಪಶ್ಚಿಮದ ಸೈಂಟ್ ಆ್ಯನ್ಸ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯುತ್ತಿತ್ತು.
ಇದೇ ಸಂದರ್ಭದಲ್ಲಿ ನೃತ್ಯ ಪ್ರದರ್ಶನಕ್ಕಾಗಿ ವೇಷ ಭೂಷಣದೊಂದಿಗೆ ಸಜ್ಜಾಗುತ್ತಿದ್ದಂತೆಯೇ ತೀವ್ರ ಹೃದಯಾಘಾತಕ್ಕೊಳಗಾದ ಇವರನ್ನು ತತ್‌ಕ್ಷಣ ಬೊರಿವಲಿಯ ಅಪೆಕ್ಸ್ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿ ಯಾಗದೆ ವಿಧಿವಶರಾದರು. ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮಹಿಳಾ ವಿಭಾಗದ ಸದಸ್ಯೆಯಾಗಿರುವ ಇವರು ಎಂಜಿನಿಯರ್ ಪದವೀಧರೆ ಯಾಗಿರುವುದಲ್ಲದೆ, ಸಂಗೀತ, ನೃತ್ಯ, ನಾಟಕ ಇನ್ನಿತರ ಕಲಾಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಸಂಸ್ಥೆಯ ಕಾರ್ಯದರ್ಶಿ, ಗೋರೆ ಗಾಂವ್ ಕರ್ನಾಟಕ ಸಂಘದ ಯುವ ವಿಭಾಗದ ಮಾಜಿ ಅಧ್ಯಕ್ಷ, ಜೋಗೇಶ್ವರಿ ಪೂರ್ವದ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ, ಶ್ರೀ ಜಗದಂಬಾ ಯಕ್ಷಗಾನ ಮಂಡಳಿ ಇದರ ಕಾರ್ಯದರ್ಶಿಯಾಗಿ ಸಮಾಜ ಸೇವೆಯಲ್ಲಿ ತೊಡಗಿರುವ, ಪುತ್ತೂರು ಸುಬ್ರಹ್ಮಣ್ಯ ಮೂಲದ ಗಣೇಶ್ ಕುಮಾರ್ ಅವರ ಧರ್ಮ ಪತ್ನಿಯಾಗಿರುವ ಚೇತನಾ ಆಚಾರ್ಯ ಅವರು ಉಡುಪಿ ಜಿಲ್ಲೆಯ ಪಡುಬಿದ್ರಿ ಪೆರಿಯೊಟ್ಟು ಮೂಲದವರು. ಮೀರಾರೋಡ್ ಪೂರ್ವ ಮೀರಾ-ಭಾಯಂದರ್‌ನ ಪ್ಲೆಝಂಟ್ ಪಾರ್ಕ್‌ನ
ಕೃಷ್ಣಧಾಮ್ ಅಪಾರ್ಟ್‌ಮೆಂಟ್‌ನ ನಿವಾಸಿಯಾಗಿರುವ ಮೃತರು ಪತಿ ಮತ್ತು ತಂದೆ-ತಾಯಿಯನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷ ಸದಾನಂದ ಎನ್. ಆಚಾರ್ಯ ಕಲ್ಯಾಣು³ರ, ಉಪಾಧ್ಯಕ್ಷ ರವೀಶ್ ಜಿ. ಆಚಾರ್ಯ, ಕಾರ್ಯದರ್ಶಿ ಹರೀಶ್ ಜಿ. ಆಚಾರ್ಯ, ಕೋಶಾಧಿಕಾರಿ ಬಾಬುರಾಜ್ ಎಂ. ಆಚಾರ್ಯ, ಜೊತೆ ಕೋಶಾಧಿಕಾರಿ ಸುಧೀರ್ ಜೆ. ಆಚಾರ್ಯ, ಮಹಿಳಾ ವಿಭಾಗಾಧ್ಯಕ್ಷೆ ಶುಭಾ ಎಸ್. ಆಚಾರ್ಯ, ಯುವ ವಿಭಾಗಾಧ್ಯಕ್ಷ ಪ್ರದೀಪ್ ಆರ್. ಆಚಾರ್ಯ, ಮಾಜಿ ಅಧ್ಯಕ್ಷರಾದ ಮಹಾಬಲ ಎ. ಆಚಾರ್ಯ, ಜಿ. ಟಿ. ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ, ಕೆ. ಪಿ. ಚಂದ್ರಯ್ಯ ಆಚಾರ್ಯ ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಡಾ| ಕೆ. ಮೋಹನ್, ಶ್ರೀಧರ ವಿ. ಆಚಾರ್ಯ ಬೊರಿವಲಿ, ಕೃಷ್ಣ ವಿ. ಆಚಾರ್ಯ ಸೇರಿದಂತೆ ನೂರಾರು ಗಣ್ಯರು ಅಂತಿಮ ದರ್ಶನ ಪಡೆದು ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.