Advertisement
ಪ್ರಪಂಚದಲ್ಲಿ ಮನುಷ್ಯನಿಗೆ ಜೀವನಶೈಲಿಯನ್ನು ಕಲಿಸಿ ಕೊಟ್ಟ ದೇಶವೇ ಭಾರತ. ಈ ಮಾನವನ ದೇಹ ಪ್ರಕೃತಿ ಯಿಂದ ನಿರ್ಮಾಣವಾಗಿದ್ದು, ದೇಹ ನಿರ್ಮಿತ ಧಾತುಗಳಿಗೆ ಈ ಪ್ರಕೃತಿಯೇ ಮೂಲ ಪೋಷಕಾಂಶ. ಜಗತ್ತಿನಲ್ಲಿ ಎಂಥ ವರೇ ಆಗಿರಲಿ ರೋಗ, ದುಃಖ, ಮುಪ್ಪು ಹಾಗೂ ಸಾವು ಈ ನಾಲ್ಕರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇದು ತಣ್ತೀ ಜ್ಞಾನವಲ್ಲ ಪ್ರಾಕೃತಿಕ ನಿಯಮ. ಈ ಸತ್ಯವನ್ನು ಅರಿತವರು ನಾವು ಹೇಗೆ ನಮ್ಮ ಬದುಕನ್ನು ಕಾಲಕ್ಕೆ ಅನುಸಾರವಾಗಿ ನಮ್ಮ ಶರೀರವನ್ನು ಕಾಪಾಡಿಕೊಳ್ಳುವುದು?
Related Articles
Advertisement
ಆಯುರ್ವೇದ ಶಾಸ್ತ್ರದಲ್ಲಿ ಪಚನಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಕಾರಣ ನಾವು ಸೇವಿಸುವ ವಿರುದ್ಧ ಆಹಾರ ಕ್ರಮ. ಅವು ಯಾವುವೆಂದರೆ– ಹಾಲು ಮತ್ತು ಮೀನು ಜತೆಯಲ್ಲಿ ಸೇವಿಸಬಾರದು.
– ಹಾಲಿನ ಜತೆ ಹುಳಿ ಹಣ್ಣು, ಪದಾರ್ಥಗಳನ್ನು ಸೇವಿಸಬಾರದು.
– ಮೊಸರನ್ನು ಬಿಸಿ ಮಾಡಿ ತಿನ್ನಬಾರದು.
– ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು.
– ಬಿಸಿ, ಖಾರ ಪದಾರ್ಥ ಸೇವನೆಯ ಅನಂತರ ತಂಪು ಪಾನೀಯ ಸೇವಿಸಬಾರದು.
ಈ ರೀತಿಯ ಆಹಾರ ಸೇವನೆಯನ್ನು ಆಯುರ್ವೇದದಲ್ಲಿ ತ್ಯಜಿಸಲಾಗಿದೆ.
ನಮ್ಮ ಆಹಾರ ಸೇವನೆ ಹೇಗಿರಬೇಕೆಂದರೆ ಸೇವಿಸುವವನ ದೈಹಿಕ ಪ್ರಕೃತಿಗೆ ಅನುಗುಣವಾಗಿರಬೇಕೇ ಹೊರತು, ಜೀವಸತ್ವದಿಂದ ಕೂಡಿದ್ದರೆ ಒಳ್ಳೆಯದು ಎಂದು ಎಲ್ಲವನ್ನು ತಿನ್ನುವುದಾಗಲಿ, ಕ್ರಮ ತಪ್ಪಿ ತಿನ್ನುವುದಾಗಲಿ ಸರಿಯಲ್ಲ. ಆಹಾರ ಸೇವನಾ ಪ್ರಮಾಣ ಹೇಗಿರಬೇಕೆಂದರೆ ಹೊಟ್ಟೆಯ 2ನೆಯ ಭಾಗ ಘನಾಹಾರವೂ ಒಂದನೇಯ ಭಾಗ ದ್ರವಾ ಹಾರವೂ ನಾಲ್ಕನೆಯ ಭಾಗವನ್ನು ವಾತಾದಿ ದೋಷಗಳ ಕಾರ್ಯ ಕ್ಕಾಗಿ ಖಾಲಿ ಬಿಡಬೇಕು. ಒಮ್ಮೆ ತಿಂದ ಆಹಾರದ ಪಚನಕ್ರಿಯೆ ಆರಂಭವಾಗಿ ಮುಗಿಯುವ ಮೊದಲೇ ಇನ್ನೊಮ್ಮೆ ಆಹಾರವನ್ನು ಸೇವಿಸುವುದು ಕ್ರಮವಲ್ಲ. ಇದರಿಂದ ಅಹಾರ ಸರಿಯಾಗಿ ಪಚನವಾಗುವುದಿಲ್ಲ. ಮಲಮೂತ್ರಗಳು ಸಕಾಲದಲ್ಲಿ ಸರಿಯಾಗಿ ದೇಹ ದಿಂದ ಹೊರಹೋಗುವುದು ಆಹಾರ ಜೀರ್ಣಿಸಿದರ ಮೊದಲ ಲಕ್ಷಣ. ದೇಹ ಪ್ರಕೃತಿಗೆ ಅನುಗುಣವಾಗಿ ಆಹಾರವನ್ನು ಸೇವಿಸಿ ಸ್ವಸ್ಥ ಆರೋಗ್ಯ ನಮ್ಮದಾಗಲಿ. ಇವುಗಳ ಜತೆಗೆ ಆತ್ಮ ಇಂದ್ರಿಯಗಳು ಕೂಡ ಪ್ರಸನ್ನತೆಯಿಂದ ಕೂಡಿರಬೇಕು. ಅದಕ್ಕಾಗಿ ನಿತ್ಯ ವ್ಯಾಯಾಮ, ಯೋಗ, ಧ್ಯಾನ, ಪ್ರಾಣಾಯಾಮ, ಮುದ್ರೆಗಳ ಅಭ್ಯಾಸ ಉತ್ತಮ. ಬೇಸಗೆ ಕಾಲದಲ್ಲಿ ಹಗಲು ದೀರ್ಘವಾಗಿರುವುದರಿಂದ ಮಧ್ಯಾಹ್ನ 12ರಿಂದ 2 ಗಂಟೆಯೊಳಗೆ ಊಟ ಮಾಡಬೇಕು. ಈ ಕಾಲದಲ್ಲಿ ಸೂರ್ಯನ ತಾಪ ತೀವ್ರವಾಗಿರುತ್ತದೆ. ಹಾಗೆಯೇ ವಾತ ವೃದ್ಧಿಸುತ್ತದೆ. ಆದ್ದರಿಂದ ಬೇಸಗೆ ಕಾಲದಲ್ಲಿ ನಮ್ಮ ದೇಹದ ಆರೈಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಆಹಾರ ಪದ್ಧತಿ: ಈ ಗ್ರೀಷ್ಮ ಋತುವಿನಲ್ಲಿ ದೇಹದ ಉಷ್ಣಾಂಶ ಅಧಿಕವಿರುತ್ತದೆ. ಆದ್ದರಿಂದ ನಮ್ಮ ದೇಹವನ್ನು ತಂಪು ಮಾಡುವಂತಹ ಆಹಾರದ ಸೇವನೆ ಜತೆಗೆ ಲಘು ಆಹಾರ ಸೇವನೆ ಅಂದರೆ ಬೇಗನೇ ಜೀರ್ಣವಾಗುವ ಆಹಾರ.
ತರಕಾರಿ: ಸೌತೆಕಾಯಿ, ಮೂಲಂಗಿ, ಕುಂಬಳಕಾಯಿ, ಸೊಪ್ಪುಗಳು. ಹಣ್ಣುಗಳು: ಕಲ್ಲಂಗಡಿ, ದಾಳಿಂಬೆ, ಮಾವು, ಕಿತ್ತಳೆ, ಮೂಸಂಬಿ. ಪಥ್ಯ ಆಹಾರ: ತುಪ್ಪ, ಹಾಲು, ಸಕ್ಕರೆ, ಮಜ್ಜಿಗೆ. ಅಪಥ್ಯ ಆಹಾರ: ಅತಿಯಾದ ಹುಳಿ, ಉಪ್ಪು ಪದಾರ್ಥ ಸೇವನೆ ಹಾಗೂ ಮದ್ಯ ಸೇವನೆ. ಚರ್ಮದ ಆರೈಕೆ: ಬೇಸಗೆಯಲ್ಲಿ ಉಷ್ಣಾಂಶ ಜಾಸ್ತಿ ಇರುವುದರಿಂದ ಚರ್ಮದ ಕಾಯಿಲೆಗಳು ಉಂಟಾಗುತ್ತವೆ. ಚರ್ಮದ ಆರೈಕೆ ಬಹಳ ಮುಖ್ಯ
1. ದಿನಕ್ಕೆ 2 ಬಾರಿ ಸ್ನಾನ ಮಾಡುವುದು
2. ದೇಹಕ್ಕೆ ಚಂದನದ ಲೇಪವನ್ನು ಹಚ್ಚುವುದು
3. ಹತ್ತಿ ಬಟ್ಟೆಯನ್ನು ಧರಿಸುವುದು
4. ಸನ್‌ಕ್ರೀಮ್, ಲೋಶನ್ ಬಳಸುವುದು.
ಕಣ್ಣಿನ ಆರೈಕೆ:
1. ಹತ್ತಿಯಿಂದ ತಂಪುನೀರು ಅಥವಾ ರೋಸ್‌ವಾಟರ್‌ನಲ್ಲಿ ಅದ್ದಿ ಕಣ್ಣಿಗೆ ಇಡುವುದು.
2. ಮುಳ್ಳುಸೌತೆಯನ್ನು ಕಣ್ಣಿನ ಮೇಲೆ ಇಡುವಂತದ್ದು
3. ತ್ರಿಫಲ ಕಷಾಯದಿಂದ ಕಣ್ಣನ್ನು ತೊಳೆದುಕೊಳ್ಳುವುದು. ಕೂದಲಿನ ಆರೈಕೆ:
1. ತಲೆಕೂದಲಿನ ಸ್ವತ್ಛತೆಯನ್ನು ಕಾಪಾಡಿಕೊಳ್ಳುವುದು.
2. ತಲೆಕೂದಲಿಗೆ ಎಣ್ಣೆಯ ಮಸಾಜ್ ಮಾಡಿ, ಸ್ನಾನ ಮಾಡುವುದು
3. ಕೂದಲಿಗೆ ಹೇರ್ ಪ್ಯಾಕನ್ನು ಹಾಕುವುದು. ಮುಖದ ಆರೈಕೆ:
-ಮುಖವನ್ನು ತಣ್ಣೀರಿನಲ್ಲಿ 3-4 ಬಾರಿ ತೊಳೆಯುವುದು.
– ತಾಜಾ ಹಣ್ಣನ್ನು ಮುಖಕ್ಕೆ ಸðಬ್ ಮಾಡುವುದು.
-ಮುಖಕ್ಕೆ ಮನೆಯಲ್ಲಿಯೇ ತಯಾರಿಸಿದ ಪ್ಯಾಕ್‌ನ್ನು ಹಾಕುವುದು.
-ಲೊಳೆಸರವನ್ನು ಮುಖಕ್ಕೆ ಹಾಕಿ ಮಸಾಜ್ ಮಾಡಿಕೊಳ್ಳುವುದು.
ಹೀಗೆ ಯಾವ ಯಾವ ಋತುವಿನಲ್ಲಿ ಯಾವ ಆಹಾರ ಕ್ರಮ ಪಾಲನೆ ಮಾಡುವುದು. ಇದರಿಂದ ಹೇಗೆ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವುದು ಅನ್ನುವುದನ್ನು ಆಯು ರ್ವೇದ ದಲ್ಲಿ ಅತೀ ಸರಳವಾಗಿ ಆಚಾರ್ಯರು ಹೇಳಿದ್ದಾರೆ. ಆರೋಗ್ಯದಿಂದಲೇ ಸಕಲ ಸೌಭಾಗ್ಯ, ಧನ, ಅಧಿಕಾರ ಸಂಪತ್ತು ಇವೆಲ್ಲವೂ ಇದ್ದು ಆರೋಗ್ಯವೇ ಇಲ್ಲದಿದ್ದರೆ ಬದುಕು ಕಷ್ಟ ಸಾಧ್ಯ. ನಮ್ಮ ಆರೋಗ್ಯದ ಕಾಳಜಿ ವಹಿಸಲು ನಮ್ಮಿಂದ ಮಾತ್ರವೇ ಸಾಧ್ಯ. – ಡಾ| ಸೋನಿ ಡಿ’ಕೋಸ್ಟಾ,
ಕುಂದಾಪುರ