Advertisement
ಬೂದುಗುಂಬಳಕಾಯಿ ಸಾಸಿವೆ ಬೇಕಾಗುವ ಸಾಮಗ್ರಿ: ಸಿಪ್ಪೆ ತೆಗೆದ ಬೂದುಕುಂಬಳ ಹೋಳು- 3 ಕಪ್, ತೆಂಗಿನ ತುರಿ-2 ಕಪ್, ಸಾಸಿವೆ- 2 ಚಮಚ, ಹಸಿಮೆಣಸಿನ ಕಾಯಿ-3, ಎಣ್ಣೆ ಒಗ್ಗರಣೆಗೆ- 2 ಚಮಚ, ಕರಿಬೇವಿನ ಎಸಳು-2, ರುಚಿಗೆ ಉಪ್ಪು , ಜೀರಿಗೆ-1 ಚಮಚ, ಹುಣಸೆಹಣ್ಣು ಗೋಲಿಗಾತ್ರ.
ಬೇಕಾಗುವ ಸಾಮಗ್ರಿ: ಬೂದುಗುಂಬಳ ಸಿಪ್ಪೆ ಸ್ವಲ್ಪ , ಆಲೂಗಡ್ಡೆ- 2, ತೆಂಗಿನ ತುರಿ-1/4 ಕಪ್, ಉಪ್ಪು ರುಚಿಗೆ, ಎಣ್ಣೆ, ಸಾಸಿವೆ, ಒಗ್ಗರಣೆ ಸೊಪ್ಪು, ಒಣಮೆಣಸಿನ ಕಾಯಿ-2.
Related Articles
Advertisement
ಅಲಸಂಡೆ, ಶೇಂಗಾ ಬೀಜದ ತಾಳು (ಪಲ್ಯ)ಬೇಕಾಗುವ ಸಾಮಗ್ರಿ: ಅಲಸಂಡೆ- 250 ಗ್ರಾಂ, ಶೇಂಗಾ ಬೀಜ-50 ಗ್ರಾಂ, ಎಣ್ಣೆ- 2 ಚಮಚ, ಸಾಸಿವೆ-1 ಚಮಚ, ಒಣಮೆಣಸಿನಕಾಯಿ- 3, ತೆಂಗಿನತುರಿ- 2 ಚಮಚ, ಉಪ್ಪು ರುಚಿಗೆ. ತಯಾರಿಸುವ ವಿಧಾನ: ಶೇಂಗಾ ಬೀಜ ನೀರಿನಲ್ಲಿ ಎರಡು ಗಂಟೆ ನೆನೆಸಿಡಿ. ಅಲಸಂಡೆಕಾಯಿ ಚಿಕ್ಕ ಚಿಕ್ಕದಾಗಿ ತುಂಡರಿಸಿಡಿ. ಕುಕ್ಕರ್‌ನಲ್ಲಿ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆ ಮಾಡಿ ಅಲಸಂಡೆ, ಶೇಂಗಾ ಬೀಜ, ತೆಂಗಿನ ತುರಿ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಮುಚ್ಚಿ ಎರಡು ಸೀಟಿ ತೆಗೆಯಿರಿ. ಊಟಕ್ಕೆ, ದೋಸೆ, ಚಪಾತಿಯೊಂದಿಗೆ ರುಚಿಕರ ತಾಳು ಸಿದ್ಧ. ಬಾಳೆದಿಂಡಿನ ಮೊಸರು ಬಜ್ಜಿ
ಬೇಕಾಗುವ ಸಾಮಗ್ರಿ: ತುಂಡರಿಸಿದ ಬಾಳೆದಿಂಡು- 2 ಕಪ್, ಹಸಿಮೆಣಸಿನ ಕಾಯಿ- 2, ದಪ್ಪ ಮೊಸರು- 1 ಕಪ್, ಉಪ್ಪು ರುಚಿಗೆ. ತಯಾರಿಸುವ ವಿಧಾನ: ಬಾಳೆದಿಂಡಿಗೆ ಉಪ್ಪು ಹಾಕಿ ಬೇಯಿಸಿಡಿ. ತಣಿದ ನಂತರ ಮೊಸರು, ಹಸಿಮೆಣಸಿನಕಾಯಿ ಚೂರು ಹಾಕಿ ಚೆನ್ನಾಗಿ ಬೆರೆಸಿ ಫ್ರಿಜ್‌ನಲ್ಲಿಡಿ. ಊಟದ ಹೊತ್ತಿಗೆ ತೆಗೆದು ಸವಿಯಿರಿ. ಮೂತ್ರಕೋಶದ ಕಲ್ಲು ನಿವಾರಣೆಗೆ ಉತ್ತಮ ಆಹಾರ. ಕಡಲೆಕಾಳಿನ ಸುಕ್ಕ
ಬೇಕಾಗುವ ಸಾಮಗ್ರಿ: ಕಡಲೆಕಾಳು- 1 ಕಪ್, ನೀರುಳ್ಳಿ ಚೂರು- 1 ಕಪ್, ಒಣಮೆಣಸಿನಕಾಯಿ 5-6, ತೆಂಗಿನ ತುರಿ- 2 ಕಪ್, ಕೊತ್ತಂಬರಿ- 2 ಚಮಚ, ಜೀರಿಗೆ-1 ಚಮಚ, ಲವಂಗ- 1, ಚೆಕ್ಕೆ- 1 ಇಂಚು, ಉಪ್ಪು ರುಚಿಗೆ, ಹುಣಸೆಹಣ್ಣು ಗೋಲಿಗಾತ್ರ. ತಯಾರಿಸುವ ವಿಧಾನ: ಕಡಲೆಕಾಳನ್ನು ಹಿಂದಿನ ದಿನ ನೆನೆಸಿಡಿ. ಮರುದಿನ ತೆಂಗಿನತುರಿ ಪರಿಮಳ ಬರುವವರೆಗೆ ಹುರಿದಿಡಿ. ಕೊತ್ತಂಬರಿ, ಜೀರಿಗೆ, ಲವಂಗ, ಚಕ್ಕೆ ಸ್ವಲ್ಪ ಹುರಿಯಿರಿ. ಒಣಮೆಣಸಿನ ಕಾಯಿ ಹುರಿದು ತೆಗೆಯಿರಿ. ತೆಂಗಿನ ತುರಿ, ಹುಣಸೆಹಣ್ಣು, ಒಣಮೆಣಸಿನಕಾಯಿ, ಸಾಂಬಾರ ಜೀನಸು ಸ್ವಲ್ಪ ದರಗಾಗಿ ರುಬ್ಬಿರಿ. ಬೇಯಿಸಿಟ್ಟ ಕಡಲೆಕಾಳಿಗೆ ರುಬ್ಬಿದ ಮಸಾಲೆ, ಉಪ್ಪುಹಾಕಿ ಕುದಿಸಿರಿ. ಸ್ವಲ್ಪ ನೀರುಳ್ಳಿಯ ಒಗ್ಗರಣೆ ಮಾಡಿ ಕಡಲೆಕಾಳಿಗೆ ಹಾಕಿ ಮುಚ್ಚಿಡಿ. ಅನ್ನದೊಂದಿಗೆ, ಚಪಾತಿ, ಪೂರಿ, ದೋಸೆಯೊಂದಿಗೆ ಆರೋಗ್ಯದಾಯಕ, ಸ್ವಾದಿಷ್ಟ ಕಡಲೆಕಾಳು ಸವಿಯಿರಿ. ಎಸ್. ಜಯಶ್ರೀ ಶೆಣೈ