Advertisement

ಸೌಂದರ್ಯವರ್ಧಕ; ಕಹಿಯಾದರೂ ಮೆಂತೆ ಕಾಳು ಸೇವನೆ ಆರೋಗ್ಯಕ್ಕೆ ಉತ್ತಮ…

04:57 PM Sep 17, 2022 | Team Udayavani |

ಮೆಂತೆಯಲ್ಲಿ ಆರೋಗ್ಯ ಪೂರಕ ಗುಣಗಳು ಇರುವುದರಿಂದ ಇದನ್ನು ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸಲಾಗುತ್ತದೆ. ಇದು ಕೇವಲ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಸೌಂದರ್ಯವರ್ಧಕ ಗುಣಗಳು ಹೆಚ್ಚಾಗಿದೆ. ಮೆಂತೆ ಕಹಿಯಾದರೂ ಅದರ ಉಪಯೋಗ ಮಾತ್ರ ಅತಿ ಹೆಚ್ಚು.

Advertisement

ಉತ್ತಮ ಜೀರ್ಣಕ್ರಿಯೆ
ಮೆಂತೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕರಿಸುತ್ತದೆ. ಇದರಲಿರುವ ಅಮೀನೋ ಆಮ್ಲ ಇನ್ಸುಲಿನ್‌ ಅಂಶವನ್ನು ಹೀರಿಲು ಸಹಕಾರಿ. ಮೆಂತೆ ಸೇವನೆ ಮಾಡಿದಲ್ಲಿ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಹೊಟ್ಟೆ ಉರಿ, ಅಜೀರ್ಣ, ಎದೆಯುರಿ, ಹೊಟ್ಟೆಯ ಕಾಯಿಲೆ, ಮಲಬದ್ದತೆ ನಿವಾರಣೆಗೆ ಮೆಂತೆಯನ್ನು ಬಳಸಲಾಗುವುದು. ದಿನನಿತ್ಯ ಮೆಂತೆ ಸೇವನೆಯಿಂದ ಕಿಡ್ನಿ ಸಮಸ್ಯೆಯನ್ನು ದೂರಮಾಡಬಹುದು.

ಜ್ವರ ನಿವಾರಣೆ
ಒಂದು ಚಮಚ ಜೇನುತುಪ್ಪ , ನಿಂಬೆ ರಸದೊಂದಿಗೆ ಮೆಂತೆ ಕಾಳು ಸೇವಿಸುವುದರಿಂದ ಜ್ವರವನ್ನು ನಿಯಂತ್ರಿಸಬಹುದು ಜತೆಗೆ ಗಂಟಲಿನ ಕಿರಿಕಿರಿಗೂ ಮುಕ್ತಿ ಸಿಗುವುದು. ವಾರದಲ್ಲಿ 2ರಿಂದ 3 ಬಾರಿ ಈ ರೀತಿ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.

ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆ
ಬಾಣಂತಿಯರಲ್ಲಿ ಎದೆ ಹಾಲು ಉತ್ಪತ್ತಿಗೆ ಮೆಂತೆ ಸೇವನೆ ತುಂಬಾ ಸಹಾಕಾರಿ, ಮತ್ತು ಋತುಚಕ್ರದ ಹಲವಾರು ಸಮಸ್ಯೆಗಳಿಗೆ ಮೆಂತೆ ಶಮನಕಾರಿ.

ಸಂಧಿವಾತಕ್ಕೆ ಚಿಕಿತ್ಸೆ
ಮೆಂತೆ ಕಾಳಿನಲ್ಲಿರುವಂತಹ ಆ್ಯಂಟಿಆಕ್ಸಿಡೆಂಟ್‌ ಹಾಗೂ ಉರಿಯೂತ ಶಮನಕಾರಿಗೆ ಇದು ರಾಮಬಾಣವಾಗಿದೆ. ದೇಹದ ಉಷ್ಣತೆ ತಗ್ಗಿಸಲು ಮತ್ತು ಇದರಲ್ಲಿ ಇರುವಂತಹ ಕೆಲವು ಪೋಷಕಾಂಶಗಳು ಪ್ರತಿರೋಧಕ ಶಕ್ತಿ ವೃದ್ಧಿಸುವ ಜತೆಗೆ ತೂಕ ಇಳಿಸಲು ಸಹಾಯಕಾರಿ.

Advertisement

ಸುಂದರ ಚರ್ಮಕ್ಕಾಗಿ ಮೆಂತೆಕಾಳಿನ ನೀರು ಜೀರ್ಣಕ್ರಿಯೆಗೆ ಸಹಕಾರಿಯಾಗಿರುವುದರಿಂದ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರ ಹಾಕುತ್ತದೆ. ಇದರಿಂದ ಚರ್ಮದಲ್ಲಿನ ಕಲೆಗಳು ಮಾಯವಾಗಿ ಆರೋಗ್ಯಕರ ತ್ವಚೆಯಿಂದ ಸೌಂದರ್ಯವನ್ನು ಹೆಚ್ಚಿಸಬಹುದು.

ಹೃದಯ ಸಂಬಂಧಿ
ಕಾಯಿಲೆಗೆ ರಾಮಬಾಣ ಮೆಂತೆ ಕಾಳಿನ ನೀರಿನ ಜತೆ ಮೆಂತೆ ಕಾಳನ್ನು ಜಗಿದು ತಿನ್ನುವುದರಿಂದ ಅದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಹೃದಯಕ್ಕೆ ಕೊಲೆಸ್ಟ್ರಾಲ್‌ನಿಂದ ಆಗುವಂತಹ ಹಾನಿಯನ್ನು ತಪ್ಪಿಸಲು ಸಹಕರಿಸುತ್ತದೆ.

ಕ್ಯಾನ್ಸರ್‌ ತಡೆ
ಮೆಂತೆಯಲ್ಲಿರುವ ನಾರಿನಾಂಶ ಆಹಾರದಲ್ಲಿರುವ ವಿಷವನ್ನು ದೇಹದಿಂದ ಹೊರಹಾಕುವುದರಿಂದ ಕರುಳಿನ ಕ್ಯಾನ್ಸರ್‌ನಿಂದ ದೂರಉಳಿಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next