Advertisement
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಅಧಿಕವಾಗಿ ಬೆಳೆಯಲಾಗುವ ಈ ಕರಿಮೆಣಸಿನ ಬಳ್ಳಿಯ ಹಣ್ಣನ್ನು ಒಣಗಿಸಿ ಕರಿಮೆಣಸಿನ ಕಾಳುಗಳನ್ನು ಪಡೆಯುವರು. ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಆರೋಗ್ಯ ಪದ್ದತಿಯಲ್ಲಿಯೂ ಬಹಳಷ್ಟು ಹೆಚ್ಚಾಗಿ ಬಳಕೆ ಮಾಡುವ ಈ ಕಾಳುಮೆಣಸು, ತಿನ್ನುವ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವುದರೊಂದಿಗೆ ಹಲವು ರೀತಿಯ ಆರೋಗ್ಯದ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
Related Articles
Advertisement
-ಕಾಳುಮೆಣಸನ್ನು ಜಜ್ಜಿ ಬಾಯಲ್ಲಿ ಹಾಕಿಕೊಂಡು ರಸವನ್ನು ನುಂಗುತ್ತಿದ್ದರೆ ನೆಗಡಿ ನಿವಾರಣೆಯಾಗುತ್ತದೆ.
-ಕಾಳುಮೆಣಸಿನ ಪುಡಿ ಮತ್ತು ಬೆಲ್ಲವನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
-ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅರಶಿನದ ಪುಡಿಯನ್ನು ಹಾಗೂ ಅರ್ಧ ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಕುಡಿಯೂದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
-ಕಾಳುಮೆಣಸು ಮತ್ತು ಚಿಟಿಕೆ ಉಪ್ಪನ್ನು ಬಾಯಿಗೆ ಹಾಕಿಕೊಂಡು ಜಗಿದು ರಸ ನುಂಗುವುದರಿಂದ ಗಂಟಲು ನೋವು ವಾಸಿಯಾಗುತ್ತದೆ.
-ಮೊಸರು ಅನ್ನಕ್ಕೆ ಕಾಳುಮೆಣಸಿನ ಪುಡಿ ಮತ್ತು ಬೆಲ್ಲವನ್ನು ಹಾಕಿಕೊಂಡು ಊಟ ಮಾಡಿದರೆ ಮೂತ್ರದ್ವಾರ ಮತ್ತು ಗುದದ್ವಾರದಲ್ಲಿ ಉಂಟಾಗುವ ಉರಿ ಕಡಿಮೆಯಾಗುತ್ತದೆ.
-ಒಂದು ಬಟ್ಟಲು ಹಾಲಿಗೆ ಒಂದು ಚಿಟಿಕೆ ಅರಿಶಿಣದ ಪುಡಿ, ಎರಡು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ರಾತ್ರಿ ಊಟ ಮಾಡಿದ ಮೇಲೆ ಕುಡಿದರೆ ನೆಗಡಿ, ಕೆಮ್ಮು ಗುಣವಾಗುತ್ತದೆ.
-ನುಗ್ಗೆ ಸೊಪ್ಪಿನ ರಸಕ್ಕೆ ಕಾಳುಮೆಣಸನ್ನು ಅರೆದು ಹಾಕಿ ಕಲಸಿ ಹಣೆಗೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.
-ಚೆನ್ನಾಗಿ ಮಾಗಿದ ರಸ ಬಾಳೆಹಣ್ಣಿನೊಂದಿಗೆ ಅರ್ಧ ಟೀ ಚಮಚ ಕಾಳು ಮೆಣಸಿನಪುಡಿ ಸೇರಿಸಿ ದಿನದಲ್ಲಿ ಮೂರು ಬಾರಿ ಸೇವಿಸಿದರೆ ನೆಗಡಿ ಕೆಮ್ಮು ಗುಣವಾಗುತ್ತದೆ.
-ಕಾಳು ಮೆಣಸಿನ ಪುಡಿಗೆ ,ಸ್ಪಲ್ಪ ಶುಂಠಿ, ಒಂದು ಈರುಳ್ಳಿ, ಜೀರಿಗೆ, ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಸರಿಯಾಗಿ ಕುದಿಸಿ. ಚೆನ್ನಾಗಿ ಕುದ್ದ ಈ ಕಷಾಯವನ್ನು ಸೇವನೆ ಮಾಡುವುದರಿಂದ ಮಳೆಗಾಲದಲ್ಲಿ ಕಂಡುಬರುವ ಶೀತ, ಕೆಮ್ಮು ಹಾಗೂ ಜ್ವರದ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
– ಹುಣಿಸೆ ಹಣ್ಣು, ಪುದಿನಾ, ಕಾಳುಮೆಣಸು, ಏಲಕ್ಕಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಅರೆದು ಉಪ್ಪು ಹಾಕಿ ತಿಂದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.
-ಮೆಣಸಿನ ಕಾಳನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿಕೊಂಡರೆ ಹಲ್ಲುನೋವು ದೂರವಾಗುತ್ತದೆ.
-ಒಂದು ವೀಳ್ಯದೆಲೆಗೆ 4 ಕಾಳುಮೆಣಸು ಮತ್ತು ಎರಡು ಹರಳು ಉಪ್ಪು ಹಾಕಿಕೊಂಡು ಚೆನ್ನಾಗಿ ಅಗಿದು ತಿಂದರೆ ಕಫ ಹೋಗುತ್ತದೆ.
-ಮೆಣಸಿನ ಕಾಳನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚಿದರೆ ಮೊಡವೆ ನಿವಾರಣೆಯಾಗುವುದು.
-ಮೆಣಸಿನ ಕಾಳನ್ನು ತುಪ್ಪದಲ್ಲಿ ಹುರಿದು ನುಣ್ಣಗೆ ಪುಡಿಮಾಡಿ ಜೇನುತುಪ್ಪದಲ್ಲಿ ಬೆರೆಸಿ ದಿನಕ್ಕೆ ಎರಡು ಮೂರು ಬಾರಿ ಸೇವಿಸಿದರೆ ನೆಗಡಿ ಕೆಮ್ಮು ಮತ್ತು ರೋಗಗಳು ಕಡಿಮೆಯಾಗುತ್ತದೆ.