Advertisement
ಗ್ರಾಮೀಣ ಪ್ರದೇಶದ ಗದ್ದೆ-ತೋಟ ಗಳಲ್ಲಿ ಕಂಡುಬರುವ ಒಂದೆಲಗದ ಸೊಪ್ಪು ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ. ಬ್ರಾಹ್ಮೀ ಎಲೆ, ಉರುಗನ ಸೊಪ್ಪು ಮುಂತಾದ ನಾನಾ ಬಗೆಯ ಹೆಸರುಗಳಿಂದ ಕರೆಯಲ್ಪಡುವ ಈ ಸೊಪ್ಪಿನ ಚಟ್ನಿಯನ್ನು ಸೇವಿಸುವುದರಿಂದ ನೆನೆಪಿನ ಶಕ್ತಿ ಹಾಗೂ ಕಣ್ಣಿನ ದೃಷ್ಟಿ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದಾಗಿದೆ.
ಒಂದೆಲಗದ ಸೊಪ್ಪು,ಕೊಬ್ಬರಿ ಎಣ್ಣೆ, ಜೀರಿಗೆ, ಕಾಳುಮೆಣಸು, ತೆಂಗಿನ ಕಾಯಿ, ಉಪ್ಪು, ಸಾಸಿವೆ, ಬೆಳ್ಳುಳ್ಳಿ ಇದನ್ನೂ ಓದಿ:ಕೊಪ್ಪಳದಲ್ಲಿ ರೈತಪರ ಸಂಘಟನೆಗಳಿಂದ ರಾ. ಹೆದ್ದಾರಿ-13 ಬಳಿ ಪ್ರತಿಭಟನೆ
Related Articles
Advertisement
ಮೊದಲು ಕೊಬ್ಬರಿ ಎಣ್ಣೆ ಅಥವಾ ತುಪ್ಪದಲ್ಲಿ ಒಂದೆಲಗದ ಸೊಪ್ಪನ್ನು ಹುರಿದುಕೊಳ್ಳಿ. ನಂತರ ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಕಾಳುಮೆಣಸು, ಒಂದು ಕಪ್ ತುರಿದ ತೆಂಗಿನ ಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗ್ರೈಂಡ್ ಮಾಡಿಕೊಳ್ಳಿ. ಆ ಬಳಿಕ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ ಹಾಕಿ ಒಗ್ಗರಣೆ ತಯಾರಿಸಿಕೊಂಡು, ಗ್ರೈಂಡ್ ಮಾಡಿಕೊಂಡಿದ್ದ ಒಂದೆಲಗ ಚಟ್ನಿಗೆ ಸೇರಿಸಿ.
ಶಾಂತಿ ಕೊಡಚಾದ್ರಿ