ಕಲಬುರಗಿ: ನಗರದ ರಾಮಮಂದಿರ-ನಾಗನಹಳ್ಳಿ ರಿಂಗ್ ರೋಡ್ ರಸ್ತೆಯ ನಗರಾಭಿವೃದ್ಧಿ ಪ್ರಾ ಧಿಕಾರದ ಕಲ್ಯಾಣ ಮಂಟಪದಲ್ಲಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ಆರೋಗ್ಯ ಪುನ ಶ್ಚೇತನ ಕೇಂದ್ರ ಶನಿವಾರದಿಂದ ಕಾರ್ಯಾರಂಭ ಮಾಡಿದೆ.
ಕೇಂದ್ರದ ಉಸ್ತುವಾರಿಯಾದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಧಿಣಾ ಧಿಕಾರಿ ರಮೇಶ ಸಂಗಾ ಕುರಿತು ಮಾತನಾಡಿ, ಸೋಂಕಿತರ ಮಾನಸಿಕ ಮತ್ತು ದೈಹಿಕ ಬಲ ಹೆಚ್ಚಿಸಲು ಜಿಲ್ಲಾ ಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾರ್ಗದರ್ಶನದಲ್ಲಿ ಈ ಕೇಂದ್ರ ತೆರೆಯಲಾಗಿದೆ.
ಕೇಂದ್ರ ಕಾರ್ಯನಿರ್ವಹಣೆ ಸಂಪೂರ್ಣ ವೆಚ್ಚವನ್ನು ವಿಪತ್ತು ನಿರ್ವಹಣೆ ಪರಿಹಾರದಲ್ಲಿ ಭರಿಸಲಾಗುತ್ತದೆ. ತರಬೇತಿಗೆ ಅವಶ್ಯವಿರುವ ಕೆಳ ಹಾಸಿಗೆಗಳನ್ನು ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಸಂಸ್ಥೆಯು ಉಚಿತವಾಗಿ ನೀಡಲು ಮುಂದೆ ಬಂದಿದೆ ಎಂದರು. ಕೇಂದ್ರದ ನೋಡಲ್ ಅ ಧಿಕಾರಿಯಾಗಿರುವ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ನಿರ್ದೇಶನದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ.
ಮಾನಸಿಕ ಒತ್ತಡ ನಿವಾರಣೆಗೆ ಆಪ್ತ ಸಮಾಲೋಚನೆಯೂ ಇಲ್ಲಿ ನಡೆಯಲಿದೆ. ಡಾ| ರಾಣಿ, ಡಾ| ಸಂಗೀತಾ, ಡಾ| ವಿಜಯ ಅವರನ್ನು ನಿಯೋಜಿಸಲಾಗಿದೆ. ತರಬೇತಿ ಕೊನೆಗೆ ಶ್ವಾಸಕೋಶ ಹೆಚ್ಚಿಸುವ ಡ್ರೈಫ್ರೂಟ್ಸ್ ಹಾಗೂ ಹಣ್ಣು ನೀಡಲಾಗುತ್ತದೆ. ಆಸ್ಪತ್ರೆಯಿಂದ ಕೇಂದ್ರಕ್ಕೆ ರೋಗಿಗಳನ್ನು ಕರೆತರುವ ಜವಾಬ್ದಾರಿ ಡಾ| ಬಸಪ್ಪ ಕ್ಯಾತನಾಳಗೆ ವಹಿಸಲಾಗಿದೆ ಎಂದು ವಿವರಿಸಿದರು