ನೆಲಮಂಗಲ: ಕರ್ನಾಟಕ ಖಾಸಗಿ ವೃದ್ಯಕೀಯ ಸಂಸ್ಥೆ ಯಿಂದ ಅಧಿಕೃತವಾಗಿ ಪರವನಾಗಿ ಪಡೆಯದ ತ್ಯಾಮ ಗೊಂಡ್ಲುವಿನ ಖಾಸಗಿ ಕ್ಲಿನಿಕ್‌ಗಳ ಮೇಲೆ ತಾಲೂಕು ವೈದ್ಯಾಧಿಕಾರಿ ಡಾ.ಹೇಮಲತಾ ಅವರ ತಂಡ ಗುರು ವಾರ ದಾಳಿ ಮಾಡಿ ಕ್ಲಿನಿಕ್‌ಗಳಿಗೆ ಬೀಗ ಹಾಕಿದರು.
ತಾಲೂಕಿನ ತ್ಯಾಮಗೊಂಡ್ಲುವಿನಲ್ಲಿ ಸುಮಾರು ವರ್ಷ ಗಳಿಂದ ಅನಧಿಕೃತವಾಗಿ ಪರವನಾಗಿಯನ್ನು ಪಡೆಯದೇ ಇರುವ 3 ಕ್ಲಿನಿಕ್ ಮತ್ತು 2 ಲಾಬ್‌ಗಳನ್ನು ಮುಚ್ಚಿಸುವಂತೆ ಡೀಸಿ ಆದೇಶದಂತೆ ಗುರುವಾರ ದಾಳಿ ನಡೆ ಸಿ ಅನುಮತಿ ಪಡೆಯುವವರೆಗೂ ಕ್ಲಿನಿಕ್‌ಗಳನ್ನು ತೆರೆಯದಂತೆ ಟಿಎಚ್‌ಒ ಡಾ.ಹೇಮಲತಾ ಸೂಚಿಸಿದರು.
ಕ್ಲಿನಿಕ್ ಬಂದ್: ತ್ಯಾಮಗೊಂಡ್ಲುವಿ ನಲ್ಲಿ ಟಿಎಚ್‌ಒ ನೇತೃತ್ವದಲ್ಲಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗುತ್ತದೆ ಎಂಬ ಮಾಹಿತಿ ಸೋರಿಕೆ ಹಿನ್ನೆಲೆ ದೇವರಾಜ ವೃತ್ತದಲ್ಲಿನ ಅಶ್ವಿನಿ ಕ್ಲಿನಿಕ್‌ನಲ್ಲಿ ರೋಗಿ ಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಅವರನ್ನು ಹೊರಕಳಿಸಿ ಪರಿಶೀಲನೆ ನಡೆಸಿ ಅನುಮತಿ ಪತ್ರವಿರಲಿಲ್ಲ, ಮೆಡಿಕಲ್ ವೆಸ್ಟೇಜ್ ಅನುಮತಿ ಪಡೆಯದೇ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿತು.
ಮಾಹಿತಿ ಸೋರಿಕೆ: ಅಧಿಕಾರಿಗಳ ದಾಳಿ ಮಾಹಿತಿ ಸೋರಿಕೆಯಾದ ಕಾರಣ ಶ್ರೀ ಗಣೇಶ ಕ್ಲಿನಿಕ್, ಗಣೇಶ್ ಕ್ಲಿನಿಕ್ ಹಾಗೂ ವಿನಾಯಕ ಲಾಬ್ ಮತ್ತು ಎಸ್‌ಎಲ್‌ವಿ ಲಾಬ್ ಗೆ ಅಧಿಕಾರಿಗಳು ಬರುವ ಮೊದಲೆ ಬಾಗಿಲು ಹಾಕಿಕೊಂಡು ಹೋಗಿದ್ದರು. ಆದ್ದರಿಂದ, ಬಾಗಿಲಿಗೆ ಹೊಸ ಬೀಗ ಹಾಕಿ ಸೀಜ್ ಮಾಡ ಲಾಯಿತು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ನಾಗೇಶ್, ಪಾಂಡು, ಕಂದಾಯ ಇಲಾ ಖೆಯ ಆರ್‌ಐ ರವಿ ಕುಮಾರ್, ಮಹೇಶ್ ಕುಮಾರ್, ತ್ಯಾಮಗೊಂಡ್ಲು
ಠಾಣೆಯ ಎಎಸೈ ನಾರಾಯಣ ರಾವ್, ಆನಂದ್, ಅಕ್ಷಯ್ ಕುಮಾರ್, ನಾರಾಯಣ ರಾವ್, ವಿಎ ಪಾರ್ಥ ಸಾರಥಿ ಇದ್ದರು.
ಜಿಲ್ಲಾಧಿಕಾರಿ ಮತ್ತು ಡಿಎಚ್‌ಒ ಅವರ ಆದೇಶದಂತೆ ತ್ಯಾಮಗೊಂಡ್ಲುವಿನ 3 ಕ್ಲಿನಿಕ್ ಮತ್ತು 2 ಲ್ಯಾಬ್ ಪರವನಾಗಿಯನ್ನು ಪಡೆಯದೇ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದ ಹಿನ್ನೆಲೆ, ಕ್ಲಿನಿಕ್‌ಗಳನ್ನು ಅನುಮತಿ ಪಡೆಯುವವರೆಗೂ ಸೀಜ್ ಮಾಡಲಾಗಿದೆ. ನಿಯಮ ಮೀರಿ ಬಾಗಿಲು ತೆರೆದು ಚಿಕಿತ್ಸೆ ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ತ್ಯಾಮಗೊಂಡ್ಲುವಿನಲ್ಲಿ ಒಂದೇ ಒಂದು ಕ್ಲಿನಿಕ್ ಸಹ ಅನುಮತಿ ಪಡೆದಿಲ್ಲ. ಮುಂದಿನ ದಿನಗಳಲ್ಲಿ ಅವುಗಳನ್ನು ಮುಚ್ಚಿಸಲಾಗುತ್ತದೆ.
●ಡಾ. ಹೇಮಲತಾ, ಟಿಎಚ್‌ಒ ನೆಲಮಂಗಲ