ನವದೆಹಲಿ: ದೇಶದಲ್ಲಿ ವಿಜಯ ದಶಮಿ ವೇಳೆಗೆ 100 ಕೋಟಿ ಡೋಸ್ ಲಸಿಕೆ ಹಾಕುವ ಗುರಿ ಇರಿಸಿಕೊಳ್ಳಲಾಗಿದೆ.ಅದಕ್ಕಾಗಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಹಲವರನ್ನು ಕೇಂದ್ರೀಕರಿಸಿ ಅದ್ಧೂರಿ ಕಾರ್ಯಕ್ರಮಕ್ಕೆ ತೀರ್ಮಾನಿಸಲಾಗಿದೆ.
ವಿಜಯದಶಮಿಯಂದು ದೇವಿಯು ದುಷ್ಟ ಸಂಹಾರ ಮಾಡಿದ್ದನ್ನು ನೆನಪಿಸಿಕೊಳ್ಳಲಾಗುತ್ತದೆ. ಅದೇ ರೀತಿ. ದೇಶ ಕೋವಿಡ್‌ವೆಂಬ ದುಷ್ಟ ಶಕ್ತಿಯನ್ನು ಮಣಿಸಿ, ಜಯ ಸಾಧಿಸಲಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡಬೇಕು ಮತ್ತು ಉದ್ದೇಶಿತ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ನೀಡಲೂ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರೂ ದೇಶವನ್ನು ದ್ದೇಶಿಸಿ ಮಾತನಾಡುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಅಸುನೀಗಿರುವ ಕೋವಿಡ್ ವಾರಿಯರ್ಸ್‌ಗಳ ಕುಟುಂಬಕ್ಕೆ ವಿಶೇಷ ಮನ್ನಣೆಯನ್ನು ಪ್ರಕಟಿಸಲಿದ್ದಾರೆ.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 332 ಹೊಸ ಪ್ರಕರಣ ಪತ್ತೆ | 515 ಸೋಂಕಿತರು ಗುಣಮುಖ