Advertisement
ಅವರು ಶನಿವಾರ ನಗರದ ಸಕೀìಟ್ ಹೌಸ್ ಬಳಿ ಆರೋಗ್ಯ ಇಲಾಖೆಯಿಂದ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳ್ಳುವ ಹೆಲ್ತ್ ಕಿಯೋಸ್ಕ್ ಕುರಿತ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಮನಪಾ ವ್ಯಾಪ್ತಿಯ ಜಪ್ಪಿನಮೊಗರು, ಸರಿಪಳ್ಳ, ಕುದ್ರೋಳಿ, ಮೀನಕಳಿಯ, ಕೃಷ್ಣಾಪುರ ಹಾಗೂ ಉಳ್ಳಾಲದ ತೊಕ್ಕೊಟ್ಟು ಬಸ್ ನಿಲ್ದಾಣ, ಒಳಪೇಟೆಯ ಅಂಬೇಡ್ಕರ್ ಭವನದ ಬಳಿ, ಕೋಟೆಪುರ ಹಾಗೂ ಚೆಂಬುಗುಡ್ಡೆ ಪ್ರದೇಶದಲ್ಲಿ ಹೆಲ್ತ್ ಕಿಯೋಸ್ಕ್ ತೆರೆಯಲು ನಿರ್ಧರಿಸಲಾಗಿದೆ. ಪ್ರಸ್ತುತ ಸ್ಥಳೀಯಾಡಳಿತದಿಂದ ವಿದ್ಯುತ್ ಹಾಗೂ ನೀರಿನ ಸಂಪರ್ಕ ನೀಡಿ, ವಾರದೊಳಗೆ ಕಿಯೋಸ್ಕ್ ಆರಂಭಗೊಳ್ಳಲಿದೆ ಎಂದರು.
Related Articles
Advertisement
ಜತೆಗೆ ಮೆಡಿಕಲ್ ಕಾಲೇಜುಗಳ ವೈದ್ಯರೂ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. 15 ದಿನಕ್ಕೊಮ್ಮೆ ವೈದ್ಯರು ಭೇಟಿ ನೀಡುವ ಕುರಿತು ಕೂಡ ಕ್ರಮ ಕೈಗೊಳ್ಳಲಾಗಿದ್ದು, ಈ ಕುರಿತು ಬೋರ್ಡ್ ಹಾಕಿ ಜನರಿಗೆ ಮಾಹಿತಿ ನೀಡಲಾಗುತ್ತದೆ. ಪ್ರಸ್ತುತ ಕೇಂದ್ರದ ಸಮಯ ಮಧ್ಯಾಹ್ನ 2.30ರಿಂದ 4.30ರ ವರೆಗೆ ನಿಗದಿ ಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮಯ ಬದಲಾಯಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮೇಯರ್ ಭಾಸ್ಕರ್ ಕೆ, ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಉಳ್ಳಾಲ ನಗರಸಭಾಧ್ಯಕ್ಷ ಕೆ. ಹುಸೈನ್, ಮಂಗಳೂರು ತಾ.ಪಂ. ಅಧ್ಯಕ್ಷ ಮೊಹಮ್ಮದ್ ಮೋನು, ಡಿಎಚ್‌ಒ ಡಾ| ರಾಮಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಹೆಲ್ತ್ ಕಿಯೋಸ್ಕ್ ಕಾರ್ಯಗಳೇನು?ಪ್ರಸವಪೂರ್ವ ಮತ್ತು ಪ್ರಸವದ ಅನಂತರದ ಸೇವೆ, ಚುಚ್ಚುಮದ್ದು ಸೇವೆ, ಐಯುಸಿಡಿ ಅಳವಡಿಕೆ, ನಿಶ್ಚಯ್ ಕಿಟ್ ಮೂಲಕ ಗರ್ಭಿಣಿ ಎಂದು ಗುರುತಿಸುವುದು, ರಕ್ತಹೀನತೆ ಮತ್ತು ಅಪೌಷ್ಟಿಕತೆಯ ಪತ್ತೆಹಚ್ಚುವಿಕೆ, ಅಸಾಂಕ್ರಾಮಿಕ ರೋಗಗಳಾದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಪತ್ತೆಹಚ್ಚುವಿಕೆ, ಕ್ಷಯರೋಗ ಪತ್ತೆಗೆ ಕಫ ಸಂಗ್ರಹಣೆ, ಮಲೇರಿಯಾ ಪತ್ತೆಗೆ ರಕ್ತಲೇಪನದ ಸಂಗ್ರಹ, ಮೂತ್ರ ಪರೀಕ್ಷೆ, ವಿವಿಧ ಆರೋಗ್ಯ ಯೋಜನೆಗಳ ಮಾಹಿತಿ ಹೆಲ್ತ್ ಕಿಯೋಸ್ಕ್ನಲ್ಲಿ ಲಭ್ಯವಾಗಲಿದೆ.