Advertisement

ದೈಹಿಕ-ಮಾನಸಿಕ ಸದೃಢತೆಗೆ ಆರೋಗ್ಯ ಮುಖ್ಯ; ಡಾ|ಶರಣಪ್ಪ

06:39 PM Dec 12, 2022 | Team Udayavani |

ಧಾರವಾಡ: ಮನುಷ್ಯನ ದೈಹಿಕ-ಮಾನಸಿಕ ಸದೃಢತೆಗೆ ಆರೋಗ್ಯ ಪ್ರಮುಖವಾಗಿದ್ದು, ಅದನ್ನು ನಿರಂತರ ಕಾಪಾಡಿಕೊಳ್ಳಲು ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡ ಡಾ|ಶರಣಪ್ಪ ಕೊಟಗಿ ಹೇಳಿದರು.

Advertisement

ನಗರದ ಮಣಕಿಲ್ಲಾ ಸರ್ಕಾರಿ ಶಾಲೆ ಆವರಣದಲ್ಲಿ ಶರಣಪ್ಪ ಕೊಟಗಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಬೃಹತ್‌ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಮಾನದಲ್ಲಿ ಜನರು ತಮ್ಮ ಕಾರ್ಯದೊತ್ತಡದಲ್ಲಿ ಆರೋಗ್ಯ ಕಡೆಗೆ ಗಮನ ನೀಡುತ್ತಿಲ್ಲ. ಹೀಗಾಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ಕಾಲಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಿವೆ ಎಂದರು.

ಈ ಹಿನ್ನೆಲೆಯಲ್ಲಿ ಟ್ರಸ್ಟ್‌ ವತಿಯಿಂದ ವರ್ಷದುದ್ದಕ್ಕೂ ಆರೋಗ್ಯ ಶಿಬಿರ ಏರ್ಪಡಿಸಿ ಜನರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಿದೆ. ಈಗಾಗಲೇ ನವನಗರ, ನವಲೂರು, ಸತ್ತೂರು ಸೇರಿದಂತೆ ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ ಮಾಡಿದ್ದು, ಮುಂಬರುವ ದಿನದಲ್ಲಿ ಮತ್ತಷ್ಟು ಬಡಾವಣೆಗಳಲ್ಲಿ ಶಿಬಿರ ಆಯೋಜಿಸಿ ಜನರಿಗೆ ಉಚಿತ ಔಷಧಿ ವಿತರಿಸಲಿದೆ ಎಂದರು.

ಶಿಬಿರಕ್ಕೆ ಚಾಲನೆ ನೀಡಿದ ನ್ಯಾಯವಾದಿ ಬಿ.ವಿ.ಪಾಟೀಲ ಮಾತನಾಡಿ, ಇಂದಿನ ಆಧುನಿಕ ಜೀವನದಲ್ಲಿ ಮನುಷ್ಯನ ಜೀವನ ಅನಾರೋಗ್ಯಕ್ಕೀಡಾಗುತ್ತಿದ್ದು, ಇದಕ್ಕೆ ಹಲವಾರು ಕಾರಣವಿದೆ. ನಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡು ಅತ್ಯಂತ ಉತ್ತಮ ಆಹಾರ, ತರಕಾರಿ ಹಣ್ಣು ಸೇವಿಸಿ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು ಎಂದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶೇಖರ ಕವಳಿ, ಡಿ.ಆರ್‌.ಸಾನುಬಾಯಿ, ಡಾ|ಕಿರಣ ಸಾಣಿಕೊಪ್ಪ, ಡಾ|ಎಂ.ಬಿ.ಕುಲಕರ್ಣಿ, ಡಾ|ಮಹಾಂತೇಶ ಕುಬಸದ, ಡಾ|ಮಾಧುರಿ ಕಬಾಡೆ, ಡಾ|ಪುಟ್ಟರಾಜಗೌಡ ಪಾಟೀಲ, ಡಾ|ಪ್ರಸನ್ನ ದೇಶಪಾಂಡೆ, ಡಾ|ಮಂಜುನಾಥ ಶಿಗ್ಗಾವಿ, ಡಾ|ಶ್ರೀಮಂತ ಉಪ್ಪಾರ, ಯಲ್ಲಪ್ಪ ಸವಣೂರ, ಪ್ರಶಾಂತ ಯಾವಗಲ್‌,ಡಾ|ಅನಿಕೇತ ಸೇರಿದಂತೆ ತಜ್ಞ ವೈದ್ಯರು ಇದ್ದರು. 500ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ-ಔಷಧಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next